ಸಾಮಾಜಿಕ ಜಾಲತಾಣ ಅನೇಕರ ಬದುಕು ಹಾಳು ಮಾಡಿದೆ. ದಾಂಪತ್ಯದ ಬಿರುಕಿಗೆ ಇದು ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಜನರು ತಮ್ಮ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಬ್ರೆಜಿಲ್ ನ ಮಹಿಳೆಯೊಬ್ಬಳು ಬೋಲ್ಡ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ದುಬಾರಿಯಾಗಿದೆ.
35 ವರ್ಷದ ಎಲೆನ್ ಫೆರೆರಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಳು. ತನ್ನ ಫೋಟೋ ಹಾಗೂ ವಿಡಿಯೋಗಳನ್ನು ಟಿಕ್ ಟಾಕ್ ಹಾಗೂ ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಿದ್ದಳು. ಫೆರೆರಾ ಈ ಕೆಲಸ ಪತಿ ಆಂಟೋನಿಯಾ ಅಗುಲೆರಾಗೆ ಇಷ್ಟವಾಗ್ತಿರಲಿಲ್ಲ. ಫೆರೆರಾ ಟಿಕ್ ಟಾಕ್ ವಿಡಿಯೋ ಒಂದರ ವಿಷ್ಯಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು. ಇದ್ರಿಂದ ಕೋಪಗೊಂಡಿದ್ದ ಆಂಟೋನಿಯಾ, ಫೆರೆರಾಗೆ 14 ಬಾರಿ ಗುಂಡು ಹಾರಿಸಿದ್ದಾನೆ. ನಂತ್ರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ದಂಪತಿಯ 6 ವರ್ಷದ ಮಗಳು ಅಲ್ಲೇ ಇದ್ದಳು ಎನ್ನಲಾಗಿದೆ.
ಕೊರೊನಾ ವೈರಸ್ ಅಸ್ತಿತ್ವದಲ್ಲಿಲ್ಲ ಎಂದಿದ್ದ ವ್ಯಕ್ತಿಯೇ ಸೋಂಕಿಗೆ ಬಲಿ…!
ಇಬ್ಬರ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು ಎಂದು ಸ್ನೇಹಿತರು ಹೇಳಿದ್ದಾರೆ. ಇಬ್ಬರ ಶವ ಮನೆಯೊಂದರ ಹಿಂಭಾಗದಲ್ಲಿ ಸಿಕ್ಕಿದೆ. ಮಗುವನ್ನು ಸಂಬಂಧಿಕರು ನೋಡಿಕೊಳ್ತಿದ್ದಾರೆ. ಫೆರೆರಾ ಟಿಕ್ ಟಾಕ್ ನಲ್ಲಿ 58 ಸಾವಿರ ಫಾಲೋವರ್ಸ್ ಹೊಂದಿದ್ದಳು.