ಬಾರ್ಡರ್ – ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಬಳಿಕ ಅಜಿಂಕ್ಯ ರಹಾನ್ ದೇಶದಲ್ಲಿ ಮಾತ್ರವಲ್ಲದೇ ಆಸ್ಟ್ರೇಲಿಯಾ ಆಟಗಾರರ ಮನ ಗೆಲ್ಲುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಆಸ್ಟ್ರೇಲಿಯಾ ಪರ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಿದ್ದ ಸ್ಪಿನರ್ ನೇಥನ್ ಲಿಯಾನ್ , ಅಜಿಂಕ್ಯ ರಹಾನೆ ನೀಡಿದ ಉಡುಗೊರೆಯನ್ನ ಕಂಡು ಸಂತಸ ಹೊರಹಾಕಿದ್ದಾರೆ.
ಬಾರ್ಡರ್ – ಗವಾಸ್ಕರ್ ಟ್ರೋಫಿಯನ್ನೇನೋ ಆಸ್ಟ್ರೇಲಿಯಾ ಕಳೆದುಕೊಂಡಿದೆ. ಆದರೆ ಈ ತಂಡದಲ್ಲಿ ಸ್ಪಿನರ್ ಆಗಿದ್ದ ನೆಥಾನ್ ಲಿಯಾನ್ಗೆ ಇದು 100ನೇ ಟೆಸ್ಟ್ ಪಂದ್ಯವಾಗಿತ್ತು. ಹೀಗಾಗಿ ಅಜಿಂಕ್ಯ ರಹಾನೆ ತಮ್ಮ ತಂಡದ ಎಲ್ಲಾ ಆಟಗಾರರ ಸಹಿ ಇರುವ ಜೆರ್ಸಿಯನ್ನ ಉಡುಗೊರೆಯಾಗಿ ನೀಡಿದ್ದರು.
ಈ ಫೋಟೋದಲ್ಲಿ ಹಾವೆಲ್ಲಿದೆ ಗುರುತಿಸಬಲ್ಲಿರಾ….?
ಈ ಉಡುಗೊರೆಯ ಜೆರ್ಸಿಯನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಆಸ್ಟ್ರೇಲಿಯಾ ಹಿರಿಯ ಆಟಗಾರ ಲಿಯಾನ್, ಸರಣಿಯನ್ನ ಗೆದ್ದ ಅಜಿಂಕ್ಯ ರಹಾನೆ ಹಾಗೂ ಟೀಂ ಇಂಡಿಯಾ ತಂಡಕ್ಕೆ ಅಭಿನಂದನೆಗಳು. ಟೀಂ ಇಂಡಿಯಾ ಟೀ ಶರ್ಟ್ ಮೇಲೆ ನಿಮ್ಮೆಲ್ಲರ ಸಹಿ ಹಾಕಿ ಅದನ್ನ ನನಗೆ ಉಡುಗೊರೆಯಾಗಿ ನೀಡಿದ ನಿಮ್ಮ ಗುಣ ನಿಮ್ಮಲ್ಲಿರುವ ಕ್ರೀಡಾ ಮನೋಭಾವವನ್ನ ತೋರಿಸುತ್ತೆ. ನನ್ನ ಗುಹೆಯಲ್ಲಿ ಇದೊಂದು ಮೌಲ್ಯಯುತವಾದ ಸೇರ್ಪಡೆಯಾಗಿದೆ ಎಂದು ಬರೆದಿದ್ದಾರೆ.
https://www.instagram.com/p/CKh6OyeDmhX/?utm_source=ig_web_copy_link