ತೊಕ್ಕೊಟ್ಟು: ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಯೊಬ್ಬ ನರ್ಸ್ ಜೊತೆಯೇ ಅಸಭ್ಯವಾಗಿ ವರ್ತಿಸಿರುವ ಘಟನೆ ಮಂಗಳೂರಿನ ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಆನ್ ಲೈನ್ ಕ್ಲಾಸ್ ವೇಳೆ ಐನಾತಿ ಐಡಿಯಾ ಮಾಡಿದ ವಿದ್ಯಾರ್ಥಿ…!
ಆರೋಗ್ಯ ತಪಾಸಣೆಗೆಂದು ವ್ಯಕ್ತಿಯೊಬ್ಬ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದ. ವೈದ್ಯರ ಸೂಚನೆ ಮೇರೆಗೆ ನರ್ಸ್ ವ್ಯಕ್ತಿಯನ್ನು ಪರೀಕ್ಷಿಸಿದ್ದಾರೆ. ಈ ವೇಳೆ ವ್ಯಕ್ತಿ ನರ್ಸ್ ಜೊತೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾನೆ. ಈ ಕುರಿತು ನರ್ಸ್ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಕೆ.ಸಿ.ರೋಡ್ ಕಾಟುಂಗರೆಗುಡ್ದೆ ನಿವಾಸಿ ಮಹಮ್ಮದ್ ಖಲೀಲ್ ಎಂದು ಗುರುತಿಸಲಾಗಿದೆ.