ನವದೆಹಲಿ: ಕೋವಿಡ್ ಲಸಿಕೆಯನ್ನು ಈಗ ಎಲ್ಲೆಡೆ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ತನಗೆ ಕೋವಿಡ್ ಲಸಿಕೆ ಕೊಡಿಸದ ಬಗ್ಗೆ ವೈದ್ಯರೊಬ್ಬರ ಪತ್ನಿ ತಮ್ಮ ಪತಿಯ ಮೇಲೆ ಅಸಮಾಧಾನ ಹೊರಹಾಕುವ ವಿಡಿಯೋವೊಂದು ವೈರಲ್ ಆಗಿದೆ.
ಕೊರೊನಾ ಲಸಿಕೆ ಪಡೆಯಲು ಹೋಗಿ ಕೆಲಸ ಕಳೆದುಕೊಂಡ ಪ್ರತಿಷ್ಠಿತ ಕಂಪನಿ ಸಿಇಓ….!
ದೆಹಲಿಯ ಪ್ರಸಿದ್ಧ ಹೃದ್ರೋಗ ತಜ್ಞ ಡಾ. ಕೆ.ಕೆ
ಅಗರವಾಲ್ ಜ. 23 ರಂದು ಕೋವಿಡ್ ಲಸಿಕೆ ಪಡೆದರು. ನಂತರ ತಮ್ಮ ಪತ್ನಿಗೆ ವಿಡಿಯೋ ಕರೆ ಮಾಡಿದ್ದು, ಆಗಿನ ಅವರಿಬ್ಬರ ಸಂಭಾಷಣೆಯ ವಿಡಿಯೋ ಟ್ವಿಟ್ಟರ್, ಫೇಸ್ ಬುಕ್ ಸೇರಿ ವಿವಿಧ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಕೊರೊನಾ ಲಸಿಕೆ ವಿರುದ್ಧ ಪೋಸ್ಟ್ ಶೇರ್ ಮಾಡುತ್ತಿದ್ದೀರಾ…? ಹಾಗಾದ್ರೆ ಈ ಸುದ್ದಿ ಓದಿ
ಲಸಿಕೆ ಪಡೆದ ಬಗ್ಗೆ ಡಾಕ್ಟರ್ ಪತ್ನಿ ಪ್ರಶ್ನಿಸಿದ ಬಳಿಕ “ಆ್ಯಪ್ ನಲ್ಲಿ ನಾನು ಲಸಿಕೆ ಪಡೆಯಬಹುದೇ ಎಂದು ಪರಿಶೀಲಿಸಿದೆ. ಪಡೆಯಬಹುದು ಎಂದು ಉತ್ತರ ಬಂತು ನಾನು ಲಸಿಕೆ ಪಡೆದೆ” ಎಂದು ಉತ್ತರ ನೀಡುತ್ತಾರೆ.
ಸಮಾಧಾನಗೊಳ್ಳದ ಆಕೆ “ಮತ್ತೆ ನನ್ನನ್ನೇಕೆ ಕರೆದುಕೊಂಡು ಹೋಗಿಲ್ಲ..?” ಎಂದು ಮರು ಪ್ರಶ್ನೆ ಹಾಕುತ್ತಾರೆ. ಸೋಮವಾರ ನಿನಗೂ ಲಸಿಕೆ ಸಿಗಲಿದೆ. ನಾವು ಲೈವ್ ನಲ್ಲಿ ಮಾತನಾಡುತ್ತಿದ್ದೇವೆ ಎಂದು ಡಾ.ಅಗರವಾಲ್ ಸೂಚ್ಯವಾಗಿ ಹೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ಪತ್ನಿ, “ನಾನು ಲೈವ್ ಆಗಿ ಬಂದು ನಿಮಗೆ ಏನು ಮಾಡುತ್ತೇನೆ ನೋಡಿ ಈಗ” ಎಂದು ಬೆದರಿಕೆ ಹಾಕುತ್ತಾರೆ.
https://www.facebook.com/watch/live/?v=3617250825026716&ref=watch_permalink&t=0