ಮೀನು ಹಿಡಿಯೋಕೆ ಸಮುದ್ರಕ್ಕೆ ದೋಣಿಯಲ್ಲಿ ತೆರಳಿದ್ದ ಸ್ನೇಹಿತರ ಗುಂಪಿಗೆ ಶಾರ್ಕ್ ಒಂದು ಭಯ ಹುಟ್ಟಿಸಿದ್ದು ಮಾತ್ರವಲ್ಲದೇ ದೋಣಿಯ ಸುತ್ತ ಸುತ್ತಿ ಸುತ್ತಿ ಕೊನೆಗೆ ಮೋಟಾರ್ಗೆ ಬಾಯಿ ಹಾಕಿದೆ.
ಮೀನನ್ನ ಹಿಡಿಯೋಕೆ ಅಂತಾ ಎರಿಕಾ ಆಲ್ಮಂಡ್ ಮತ್ತವರ ಸ್ನೇಹಿತರು ಮೆಕ್ಸಿಕೋದ ಸಮುದ್ರವೊಂದರಲ್ಲಿ ದೋಣಿ ವಿಹಾರ ಕೈಗೊಂಡಿದ್ದರು. ಈ ವೇಳೆ ದೋಣಿಯ ಬಳಿಯೇ ಶಾರ್ಕ್ ಬಂದಿದ್ದು ದೋಣಿಯ ಸುತ್ತ ರೌಂಡ್ಸ್ ಹಾಕಿದೆ.
ಕನಿಕರ ಹುಟ್ಟಿಸುತ್ತೆ ʼಏಲಿಯನ್ʼ ರೀತಿ ಕಾಣಲೋದವನ ಅವಸ್ಥೆ
ಮೀನು ಹಿಡಿಯುವಾಗ ಹೀಗೆ ಶಾರ್ಕ್ಗಳು ಬರೋದು ಸಾಮಾನ್ಯ. ಆದರೆ ಇದು 14 ರಿಂದ 16 ಅಡಿಗಳಷ್ಟು ದೊಡ್ಡದಾಗಿ ಇರುವ ಬಿಳಿ ಬಣ್ಣದ ಶಾರ್ಕ್ ಆಗಿತ್ತು.
ಅಲ್ಲದೇ ನಮ್ಮ ದೋಣಿಯ ಮೋಟಾರ್ನ ಒಂದು ಭಾಗವನ್ನ ಕಚ್ಚಿ ಹೊರ ತೆಗೆದಿದೆ ಎಂದು ದೋಣಿಯಲ್ಲಿದ್ದವರು ಹೇಳಿದ್ದಾರೆ.
https://www.facebook.com/erika.almond/posts/10221280324010914