ಕ್ಯಾನ್ಸರ್ ರೋಗಿಗಳು ಕೀಮೋಥೆರಪಿಗೆ ಒಳಗಾಗುತ್ತಿದ್ದಂತೆಯೇ ತಮ್ಮ ತಲೆಗೂದಲನ್ನ ಕಳೆದುಕೊಳ್ತಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ. ಇದೇ ಕಾರಣದಿಂದ ಬಹುತೇಕ ಕ್ಯಾನ್ಸರ್ ರೋಗಿಗಳು ತಮ್ಮ ರೂಪ ಹಾಳಾಯ್ತಲ್ಲ ಅಂತಾ ದುಃಖ ಪಡೋದಿದೆ. ಕೆಲವೊಬ್ಬರಂತೂ ಖಿನ್ನತೆಗೆ ಒಳಗಾಗಿಬಿಡ್ತಾರೆ.
ಕೊರೊನಾ ಲಸಿಕೆ ಕೊಡಿಸದ ವೈದ್ಯರಿಗೆ ಪತ್ನಿಯಿಂದ ಕ್ಲಾಸ್…! ವಿಡಿಯೋ ವೈರಲ್
ಇಂತಹ ಸಂದರ್ಭದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕುಟುಂಬಸ್ಥರು ನೀಡುವ ಧೈರ್ಯ ಹಾಗೂ ಆತ್ಮವಿಶ್ವಾಸವೇ ಅವರನ್ನ ಈ ದುಃಖದಿಂದ ಹೊರಬರುವಂತೆ ಮಾಡೋಕೆ ಸಾಧ್ಯ. ಎಲ್ಲಾ ಪೋಷಕರು ತಮ್ಮ ಕೊನೆಗಾಲದಲ್ಲಿ ಮಕ್ಕಳು ತಮ್ಮನ್ನ ನೋಡಿಕೊಳ್ಳಲಿ ಎಂಬ ಆಸೆಯನ್ನ ಇಟ್ಟುಕೊಂಡಿರ್ತಾರೆ. ಆದರೆ ಇಲ್ಲೊಬ್ಬ ತಾಯಿ ಕ್ಯಾನ್ಸರ್ ರೋಗಿಯಾದ ತನ್ನ ಮಗಳಿಗೆ ಆತ್ಮವಿಶ್ವಾಸ ತುಂಬಬೇಕು ಅಂತಾ ಮಾಡಿದ ಕೆಲಸ ನೋಡಿದ್ರೆ ನಿಮ್ಮ ಕಣ್ಣಂಚಲ್ಲಿ ನೀರೂರೋದು ಗ್ಯಾರಂಟಿ.
ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಮಗಳು ತನ್ನ ತಲೆಗೂದಲನ್ನ ತೆಗೆದ ಬಳಿಕ ಆಕೆಗೆ ಬೇಸರವಾಗಬಾರದು ಅಂತಾ ತಾನೂ ಕೂಡ ತಲೆಕೂದಲನ್ನ ಸಂಪೂರ್ಣ ಕತ್ತರಿಸಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ತಾಯಿ – ಮಗಳ ಪ್ರೀತಿಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಮೂಕವಿಸ್ಮಿತರಾಗಿದ್ದಾರೆ.
ಪರಾಭವದ ನಂತರ ಟ್ರಂಪ್ ನಿವಾಸದ ಎದುರು ಹಾರಾಡುತ್ತಿದೆ ಈ ಬ್ಯಾನರ್...!
ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಲುಸಿಯಾನಾ ರೆಬೆಲ್ಲೋ ಈ ವಿಡಿಯೋ ಶೇರ್ ಮಾಡಿದ್ದು, ತಾಯಿ ಪ್ರೀತಿ ಅಂದರೆ ಇದು ಎಂದು ಶೀರ್ಷಿಕೆ ಬರೆದಿದ್ದಾರೆ.
6 ನಿಮಿಷಗಳ ವಿಡಿಯೋದಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ಸೇರಿ ರೆಬೆಲ್ಲೋ ತಲೆಗೂದಲನ್ನ ಶೇವ್ ಮಾಡುತ್ತಿರ್ತಾರೆ. ಈ ಮಧ್ಯದಲ್ಲೇ ತಾಯಿ ಕ್ಯಾಮರವನ್ನೇ ನೋಡುತ್ತಾ ತನ್ನ ತಲೆಯ ಕೂದಲನ್ನೂ ಟ್ರಿಮ್ ಮಾಡಿದ್ದಾರೆ. ಇದನ್ನ ನೋಡಿ ರೆಬೆಲ್ಲೋ ಶಾಕ್ ಆಗಿದ್ದಾರೆ. ಬಳಿಕ ತಾಯಿ – ಮಗಳಿಬ್ಬರ ಕಣ್ಣಲ್ಲೂ ನೀರು ಜಿನುಗಿದೆ.
https://www.facebook.com/luciana.rebello.12/videos/3442802942512689/?t=0