alex Certify ಮಾಸ್ಕ್​ಗಳನ್ನ ಎಷ್ಟು ದಿನಗಳಿಗೊಮ್ಮೆ ಸ್ವಚ್ಛ ಮಾಡಬೇಕು…? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್​ಗಳನ್ನ ಎಷ್ಟು ದಿನಗಳಿಗೊಮ್ಮೆ ಸ್ವಚ್ಛ ಮಾಡಬೇಕು…? ಇಲ್ಲಿದೆ ಮಾಹಿತಿ

ಜಗತ್ತಿನಲ್ಲಿ ಕೊರೊನಾ ವೈರಸ್​ ಕಾಟ ಕೊನೆಗೊಂಡು ಜನತೆ ಮಾಸ್ಕ್​ ಹಾಗೂ ಸ್ಯಾನಿಟೈಸರ್​ಗಳನ್ನ ಬಳಕೆ ಮಾಡದೇ ಇರುವಂತಹ ದಿನಗಳು ಯಾವಾಗ ಬರುತ್ತೋ ಅಂತಾ ಎಲ್ಲರೂ ಬೆರಗು ಕಣ್ಣಿನಿಂದ ಕಾಯುತ್ತಿದ್ದಾರೆ. ಆದರೆ ಈ ಮಾತು ಸದ್ಯಕ್ಕಂತೂ ನಿಜ ಆಗೋ ರೀತಿ ಕಾಣ್ತಿಲ್ಲ. ಹೀಗಾಗಿ ಮಾಸ್ಕ್​ ಹಾಗೂ ಸ್ಯಾನಿಟೈಸರ್​ಗಳನ್ನ ಬಳಕೆ ಮಾಡಲೇಬೇಕಾಗಿದೆ. ಈಗಂತು ಮರು ಬಳಕೆ ಮಾಡಲು ಸಾಧ್ಯವಾಗುವಂತಹ ಮಾಸ್ಕ್​​ಗಳನ್ನೇ ಹೆಚ್ಚಾಗಿ ಬಳಕೆ ಮಾಡಲಾಗ್ತಿದೆ. ಮಾಸ್ಕ್​ಗಳನ್ನ ಎಷ್ಟು ದಿನಗಳಿಗೊಮ್ಮೆ ಸ್ವಚ್ಛ ಮಾಡಬೇಕು ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಕಾಯಿಲೆ ನಿಯಂತ್ರಣ ಕೇಂದ್ರ ನೀಡಿರುವ ಮಾಹಿತಿ ಪ್ರಕಾರ, ನೀವು ಯಾವ ಮಾಸ್ಕ್​ ಬಳಕೆ ಮಾಡ್ತೀರಿ ಹಾಗೂ ಎಷ್ಟು ಗಂಟೆಗಳ ಕಾಲ ಬಳಕೆ ಮಾಡ್ತೀರಿ ಅನ್ನೋದರ ಮೇಲೆ ಅದನ್ನ ಹೇಗೆ ಸ್ವಚ್ಛ ಮಾಡಬೇಕು ಅನ್ನೋದನ್ನ ನಿರ್ಧರಿಸಲಾಗುತ್ತೆ.

ಮಾಸ್ಕ್​ಗಳು ಮೂಗು ಹಾಗೂ ಬಾಯಿಗೆ ತುಂಬಾ ಹತ್ತಿರದಲ್ಲಿ ಇರುವ ಕಾರಣ ಇದರಲ್ಲಿ ಯಾವುದೇ ಕ್ರಿಮಿಗಳು ಕೂರದಂತೆ ಲಕ್ಷ್ಯ ವಹಿಸಬೇಕು. ಯಾವುದೇ ವೈರಸ್​ಗಳು ಈ ಮಾಸ್ಕ್​ಗಳ ಮೇಲೆ ಕೂತರೂ ಸಹ ಅಪಾಯ ಇದೆ.

ನೆಚ್ಚಿನ ಶ್ವಾನಕ್ಕೆ ಗಿಫ್ಟ್ ನೀಡಿದ ವಿಶ್ವದ ಅತಿ ಸಿರಿವಂತ…..! ಮರುಕ್ಷಣವೇ ನಡೆದಿದೆ ಈ ಘಟನೆ

ವೈದ್ಯೆ ಬೆಲಾ ಶರ್ಮಾ ನೀಡಿರುವ ಮಾಹಿತಿ ಪ್ರಕಾರ, ಬಟ್ಟೆಯಿಂದ ತಯಾರಾದ ಮಾಸ್ಕ್​ಗಳನ್ನ ಪ್ರತಿಬಾರಿ ಬಳಸಿದ ಬಳಿಕವೂ ವಾಶ್​ ಮಾಡಬೇಕು. ಹೀಗಾಗಿ ಎರಡು ಮಾಸ್ಕ್​ಗಳನ್ನ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ನೀವೆನಾದರೂ ಆರೋಗ್ಯ ಸಿಬ್ಬಂದಿಯಾಗಿದ್ದರೆ ಎನ್​ 95 ಮಾಸ್ಕ್​​ಗಳನ್ನೇ ಬಳಕೆ ಮಾಡಬೇಕಾಗುತ್ತೆ. ಈ ಮಾಸ್ಕ್​ಗಳನ್ನ ನೀವು 5 ದಿನಗಳ ಕಾಲ ಬಳಕೆ ಮಾಡಬಹುದು. ಆಮೇಲೆ ಬೇರೆ ಮಾಸ್ಕ್ ಧರಿಸಿ ಎಂದು ಹೇಳಿದ್ದಾರೆ.

ದಿನನಿತ್ಯದ ಬಳಕೆಗೆ ಮಾಸ್ಕ್ ಹಾಕುವವರು ಪ್ರತಿವಾರ ಹೊಸ ಮಾಸ್ಕ್​ ಕೊಳ್ಳಬೇಕು ಎಂದೇನಿಲ್ಲ. ಮಾಸ್ಕ್​ಗಳನ್ನ ಪ್ರತಿನಿತ್ಯ ಸ್ವಚ್ಛ ಮಾಡೋದ್ರ ಮೂಲಕ ಮರು ಬಳಕೆ ಮಾಡಬಹುದಾಗಿದೆ. ಸಾಬೂನು ದ್ರವದ ಸಹಾಯದಿಂದ ಬೆಚ್ಚನೆಯ ನೀರಿನಲ್ಲಿ ಮಾಸ್ಕ್​ಗಳನ್ನ ತೊಳೆದು, ಬಿಸಿಲಿನಲ್ಲಿ ಒಣಗಿಸಿ ಮರು ಬಳಕೆ ಮಾಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...