ಬಹುತೇಕ ಭಾರತೀಯರು ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡುವ ಪ್ರಕ್ರಿಯೆ ಸುರಕ್ಷಿತವೆಂದು ನಂಬಿದ್ದಾರೆ. ಆದರೆ ಡೇಟಿಂಗ್ ಅಪ್ಲಿಕೇಶನ್ಗಳ ವಿಚಾರದಲ್ಲಿ ಮಾತ್ರ ಭಾರತೀಯರಿಗೆ ಅಷ್ಟೊಂದು ನಂಬಿಕೆ ಇಲ್ಲ ಅನ್ನೋ ವಿಚಾರ ಸರ್ವೇಯೊಂದರಿಂದ ಬಯಲಾಗಿದೆ.
ನಾಲ್ಕರಲ್ಲಿ ಮೂರು ಮಂದಿ ಅಂದರೆ ಸುಮಾರು 75 ಪ್ರತಿಶತ ಮಂದಿ ಸೈಬರ್ ಅಪರಾಧಕ್ಕೆ ಬಲಿಯಾಗುವ ಭಯವನ್ನ ಹೊಂದಿದ್ದಾರೆ. ಇನ್ನು ಉಳಿದ 20 ಪ್ರತಿಶತ ಮಂದಿ ಸೈಬರ್ ದಾಳಿಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ನಮಗಿಲ್ಲ ಎಂದಿದ್ದಾರೆ. 2021ರ ಗ್ರಾಹಕರ ಭದ್ರತಾ ಮನೋಭಾವ ಈ ವರದಿಯನ್ನ ನೀಡಿದೆ.
ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ತಿಳಿದಿರಲಿ ಈ ಮಾಹಿತಿ
78 ಪ್ರತಿಶತ ಭಾರತೀಯರು ತಮ್ಮ ಹಣಕಾಸಿನ ವ್ಯವಹಾರ, ಕ್ರೆಡಿಟ್ ಕಾರ್ಡ್ ಹಾಗೂ ಬ್ಯಾಂಕಿಂಗ್ ಮಾಹಿತಿ ಲೀಕ್ ಆಗಬಹುದು ಎಂಬ ಭಯವನ್ನ ಹೊಂದಿದ್ದಾರೆ. 74 ಪ್ರತಿಶತ ಮಂದಿ ತಮ್ಮ ವೈಯಕ್ತಿ ದಾಖಲೆಗಳು ಹ್ಯಾಕ್ ಆಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸಮಸ್ಯೆಯಿಂದ ಪಾರಾಗಲು ದಾರಿ ಹುಡುಕೋಕಿಂತ ಸಮಸ್ಯೆಗೆ ಸಿಲುಕದೇ ಇರೋದೇ ಒಳ್ಳೆಯದು. ಹೀಗಾಗಿ ಯಾವುದೇ ವೆಬ್ಸೈಟ್ಗಳ ಮೇಲೆ ಕ್ಲಿಕ್ ಮಾಡುವ ಇಲ್ಲವೇ ಅಪ್ಲಿಕೇಶನ್ಗಳನ್ನ ಇನ್ಸ್ಟಾಲ್ ಮಾಡುವ ಮುನ್ನ ನೂರು ಬಾರಿ ಯೋಚಿಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ.
ನಮ್ಮ ಗೌಪ್ಯ ವಿಚಾರಗಳನ್ನ ಕಾಪಾಡಿಕೊಂಡಷ್ಟೂ ನಮ್ಮ ಮನಸ್ಥಿತಿ ಶಾಂತವಾಗಿ ಇರುತ್ತೆ. ಈ ವಿಚಾರದಲ್ಲಿ ಭಾರತೀಯರು ಉತ್ತಮ ಮನಸ್ಥಿತಿ ಹೊಂದಿದ್ದಾರೆ ಎಂದು ಅಧ್ಯಯನ ಹೇಳಿದೆ.