ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಕಳೆದ ಎರಡು ತಿಂಗಳಿನಿಂದ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರ ನಿಂತಿದ್ದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೊರೆಯುವ ಚಳಿಯ ನಡುವೆಯೂ ಪಂಜಾಬ್, ಹರಿಯಾಣ ಹಾಗೂ ಉತ್ತರ ಪ್ರದೇಶ ರೈತರು ಕಳೆದ 60 ದಿನಗಳಿಂದ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ಒಮ್ಮೆಯಾದರೂ ಸ್ಥಳಕ್ಕೆ ಭೇಟಿ ನೀಡಿ ಅವರನ್ನ ವಿಚಾರಿಸಿದ್ರಾ ? ಈ ರೈತರೇನು ಪಾಕಿಸ್ತಾನಕ್ಕೆ ಸೇರಿದವರಾ..? ಎಂದು ಶರದ್ ಪವಾರ್ ಗುಡುಗಿದ್ದಾರೆ. ದೆಹಲಿ ಪ್ರತಿಭಟನೆಯನ್ನ ಬೆಂಬಲಿಸಿ ಮುಂಬೈನಲ್ಲಿ ನಡೆಸಲಾದ ರ್ಯಾಲಿಯಲ್ಲಿ ಶರದ್ ಪವಾರ್ ಭಾಗಿಯಾಗಿದ್ದರು.
ಇದೇ ವೇಳೆ ಮಹಾರಾಷ್ಟ್ರ ರಾಜ್ಯಪಾಲರ ವಿರುದ್ಧವೂ ಹರಿಹಾಯ್ದ ಶರದ್, ಮಹಾರಾಷ್ಟ್ರ ಇಂತಹ ರಾಜ್ಯಪಾಲರನ್ನ ಹಿಂದೆಂದೂ ಕಂಡಿರಲಿಲ್ಲ. ಈ ರಾಜ್ಯಪಾಲರಿಗೆ ಕಂಗನಾ ರಣಾವತ್ರನ್ನ ಭೇಟಿಯಾಗೋಕೆ ಸಮಯವಿದೆ. ಆದರೆ ರಾಜ್ಯದ ರೈತರನ್ನ ಭೇಟಿ ಮಾಡೋಕೆ ಸಮಯವಿಲ್ಲ. ರೈತರನ್ನ ಭೇಟಿಯಾಗಿ ಅವರ ಕ್ಷೇಮ ವಿಚಾರಿಸೋದು ರಾಜ್ಯಪಾಲರ ಕರ್ತವ್ಯ ಎಂದು ಕಿಡಿಕಾರಿದ್ರು.