alex Certify ಶಾಕಿಂಗ್​: ಡಾರ್ಕ್​ ವೆಬ್​​ನಲ್ಲಿ 3.3 ಲಕ್ಷ ಭಾರತೀಯರ ಬ್ಯಾಂಕ್ ವ್ಯವಹಾರದ​​​ ಮಾಹಿತಿ ಲೀಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಡಾರ್ಕ್​ ವೆಬ್​​ನಲ್ಲಿ 3.3 ಲಕ್ಷ ಭಾರತೀಯರ ಬ್ಯಾಂಕ್ ವ್ಯವಹಾರದ​​​ ಮಾಹಿತಿ ಲೀಕ್​..!

ಸುಮಾರು 3.3 ಲಕ್ಷ ಭಾರತೀಯರ ಬ್ಯಾಂಕ್​ ಖಾತೆ ಹಾಗೂ ಕೆವೈಸಿ ದಾಖಲೆ ಸೇರಿದಂತೆ ಸೂಕ್ಷ್ಮ ಹಣಕಾಸು ವಿವರಗಳನ್ನ ಡಾರ್ಕ್​ ವೆಬ್​​ನಲ್ಲಿ ಹ್ಯಾಕರ್ಸ್​ ಗುಂಪು ಸೋರಿಕೆ ಮಾಡಿದ ಎಂಬ ಆಘಾತಕಾರಿ ಮಾಹಿತಿಯನ್ನ ಸೈಬರ್​ ಭದ್ರತಾ ಸಂಶೋಧಕ ರಾಜಶೇಖರ್​ ರಾಜ ಹರಿಯಾ ನೀಡಿದ್ದಾರೆ.

ಕ್ರಿಪ್ಟೋ ಕರೆನ್ಸಿ ಎಕ್ಸ್​ಚೇಂಜ್​ ಕಂಪನಿಯಾದ ಬೈ ಯು ಕಾಯಿನ್​ನ ಡೇಟಾ ಬೇಸ್​ ಉಲ್ಲಂಘನೆಯಿಂದ ಈ ರೀತಿ ಆಗಿದೆ ಎಂದು ಆರೋಪಿಸಲಾಗಿದೆ.

ಬೈ ಯು ಕಾಯಿನ್​ ಡೇಟಾ ಬೇಸ್​​ ಉಲ್ಲಂಘನೆ ಆರೋಪವನ್ನ ನಿರಾಕರಿಸಿದೆ. ದಾಖಲೆಗಳನ್ನ ಲೀಕ್​ ಮಾಡಿದರ ಬಗ್ಗೆ ಶೈನಿ ಹಂಟರ್ಸ್​ ಹ್ಯಾಕರ್ಸ್ ಗುಂಪು ಇದೆ ಎಂದು ರಾಜಹರಿಯಾ ಹೇಳಿದ್ದಾರೆ. ಈ ಗುಂಪು 6 ಜಿಬಿ ಭಾರತೀಯರ ಮಾಹಿತಿಯನ್ನ ಡಾರ್ಕ್​ ವೆಬ್​​ನಲ್ಲಿ ಉಚಿತವಾಗಿ ಹಂಚಿಕೊಂಡಿದೆ. ಈ ಬಗ್ಗೆ ರಾಜಹರಿಯಾ ಸ್ಕ್ರೀನ್​ಶಾಟ್​​ಗಳನ್ನೂ ಶೇರ್​ ಮಾಡಿದ್ದಾರೆ.

ಭಾರತೀಯ ಬಳಕೆದಾರರ ಹೆಸರು, ಫೋನ್​ ಸಂಖ್ಯೆ, ಪ್ಯಾನ್​​ ಸಂಖ್ಯೆ, ಇಮೇಲ್​ ವಿಳಾಸ, ಬ್ಯಾಂಕ್​ ವಿವರಗಳನ್ನ ಲೀಕ್​ ಮಾಡಲಾಗಿದೆ. ಕ್ರಿಪ್ಟೋಕರೆನ್ಸಿಗಳನ್ನ ಖರೀದಿ ಮಾಡೋಕೆ ಬೈ ಯು ಕಾಯಿನ್​ ಗ್ರಾಹಕರಿಂದ ಈ ಮಾಹಿತಿಯನ್ನ ಸಂಗ್ರಹಿಸುತ್ತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...