ಭಾರತೀಯ ಎಲೆಕ್ಟ್ರಾನಿಕ್ ಬೈಕ್ಗಳ ಮಾರುಕಟ್ಟೆಗೆ ಇಂದು ಹೊಸ ಸದಸ್ಯನ ಆಗಮನವಾಗಿದೆ. ಭಾರತದ ಪ್ರತಿಷ್ಠಿತ ಎಲೆಕ್ಟ್ರಾನಿಕ್ ಬೈಕ್ ತಯಾರಕ ಕಂಪನಿಯಾದ ಒಕಿನಾವಾ ಇಂದು ಹೊಸ ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್ನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆಕರ್ಷಕ ವಿನ್ಯಾಸ ಹಾಗೂ ಸದೃಢ ಇಂಜಿನ್ ಸಾಮರ್ಥ್ಯವನ್ನ ಈ ಬೈಕ್ ಹೊಂದಿದೆ. ಈ ಹೊಸ ಇ ಸ್ಕೂಟರ್ನ ಬೆಲೆ 58,998 ರೂಪಾಯಿ ಎಂದು ಕಂಪನಿ ತಿಳಿಸಿದೆ.
ಇದು ಬಿ 2ಬಿ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಉದ್ಯಮ ಲೋಕಕ್ಕೆ ನೆರವಾಗುವ ನಿಟ್ಟಿನಲ್ಲಿ ಈ ಬೈಕ್ಗಳನ್ನ ಕಂಪನಿ ವಿನ್ಯಾಸಗೊಳಿಸಿದ್ದು ಈ ಬೈಕ್ನ ಸಹಾಯದಿಂದ ನೀವು ಹೆಚ್ಚಿನ ಸರಕನ್ನ ಒಂದು ಸ್ಥಳದಿಂದ ಇನ್ನೊಂದೆಡೆಗೆ ಸಾಗಿಸಬಹುದಾಗಿದೆ. ಈ ಎಲೆಕ್ಟ್ರಿಕ್ ಬೈಕ್ ಒಂದು ಬಾರಿಗೆ 200 ಕೆಜಿ ತೂಕದ ವಸ್ತುಗಳನ್ನ ಹೊರುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ತಿಳಿಸಿದೆ.
ಕೆಂಪು ಹಾಗೂ ಹಳದಿ ಬಣ್ಣದಲ್ಲಿ ಈ ಬೈಕ್ಗಳು ಲಭ್ಯವಿದೆ. ಬೈಕ್ ಮುಂಬದಿ ಹಾಗೂ ಹಿಬಂದಿಗಳಲ್ಲಿ ಸಾಮಗ್ರಿಗಳನ್ನ ಇಡಲು ನೆರವಾಗುವಂತೆ ಕ್ಯಾರಿಯರ್ಗಳನ್ನ ಇಡಲಾಗಿದೆ. ಹೀಗಾಗಿ ನೀವು ಇದರಲ್ಲಿ ಡೆಲಿವರಿ ಬಾಕ್ಸ್ಗಳನ್ನ ಅನಾಯಾಸವಾಗಿ ಇಡಬಹುದು.
250 ವ್ಯಾಟ್ ಎಲೆಕ್ಟ್ರಿಕ್ ಮೋಟರ್ಗಳನ್ನ ಈ ಬೈಕ್ ಹೊಂದಿದ್ದು ಪ್ರತಿ ಗಂಟೆಗೆ 25 ಕಿಲೋಮೀಟರ್ ಸಾಮರ್ಥ್ಯದಲ್ಲಿ ಚಲಿಸಲಿದೆ. 48 ವ್ಯಾಟ್ನ ಬ್ಯಾಟರಿ ಕ್ಯಾಪಾಸಿಟಿ ಇದ್ದು ಒಂದು ಗಂಟೆಯಲ್ಲಿ ನೀವು 80 ಪ್ರತಿಶತ ಚಾರ್ಜ್ ಮಾಡಬಹುದಾಗಿದೆ. ಈ ಬೈಕ್ನ ವೇಗ ಕಡಿಮೆ ಇರೋದ್ರಿಂದ ನೀವು ಲೈಸೆನ್ಸ್ ಹೊಂದಬೇಕು ಎಂಬ ಅವಶ್ಯಕತೆ ಇರೋದಿಲ್ಲ.