alex Certify ಮಾರುಕಟ್ಟೆಗೆ ಬಂದಿದೆ ಹೊಸ ವಿನ್ಯಾಸದ ಎಲೆಕ್ಟ್ರಿಕ್​ ಬೈಕ್.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರುಕಟ್ಟೆಗೆ ಬಂದಿದೆ ಹೊಸ ವಿನ್ಯಾಸದ ಎಲೆಕ್ಟ್ರಿಕ್​ ಬೈಕ್.​..!

ಭಾರತೀಯ ಎಲೆಕ್ಟ್ರಾನಿಕ್​ ಬೈಕ್​ಗಳ ಮಾರುಕಟ್ಟೆಗೆ ಇಂದು ಹೊಸ ಸದಸ್ಯನ ಆಗಮನವಾಗಿದೆ. ಭಾರತದ ಪ್ರತಿಷ್ಠಿತ ಎಲೆಕ್ಟ್ರಾನಿಕ್​ ಬೈಕ್​ ತಯಾರಕ ಕಂಪನಿಯಾದ ಒಕಿನಾವಾ ಇಂದು ಹೊಸ ಡ್ಯುಯಲ್​ ಎಲೆಕ್ಟ್ರಿಕ್​​ ಸ್ಕೂಟರ್​ನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆಕರ್ಷಕ ವಿನ್ಯಾಸ ಹಾಗೂ ಸದೃಢ ಇಂಜಿನ್​ ಸಾಮರ್ಥ್ಯವನ್ನ ಈ ಬೈಕ್​ ಹೊಂದಿದೆ. ಈ ಹೊಸ ಇ ಸ್ಕೂಟರ್​ನ ಬೆಲೆ 58,998 ರೂಪಾಯಿ ಎಂದು ಕಂಪನಿ ತಿಳಿಸಿದೆ.

ಇದು ಬಿ 2ಬಿ ಎಲೆಕ್ಟ್ರಿಕ್​ ಸ್ಕೂಟರ್​ ಆಗಿದೆ. ಉದ್ಯಮ ಲೋಕಕ್ಕೆ ನೆರವಾಗುವ ನಿಟ್ಟಿನಲ್ಲಿ ಈ ಬೈಕ್​​ಗಳನ್ನ ಕಂಪನಿ ವಿನ್ಯಾಸಗೊಳಿಸಿದ್ದು ಈ ಬೈಕ್​ನ ಸಹಾಯದಿಂದ ನೀವು ಹೆಚ್ಚಿನ ಸರಕನ್ನ ಒಂದು ಸ್ಥಳದಿಂದ ಇನ್ನೊಂದೆಡೆಗೆ ಸಾಗಿಸಬಹುದಾಗಿದೆ. ಈ ಎಲೆಕ್ಟ್ರಿಕ್​ ಬೈಕ್​ ಒಂದು ಬಾರಿಗೆ 200 ಕೆಜಿ ತೂಕದ ವಸ್ತುಗಳನ್ನ ಹೊರುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಕೆಂಪು ಹಾಗೂ ಹಳದಿ ಬಣ್ಣದಲ್ಲಿ ಈ ಬೈಕ್​ಗಳು ಲಭ್ಯವಿದೆ. ಬೈಕ್​ ಮುಂಬದಿ ಹಾಗೂ ಹಿಬಂದಿಗಳಲ್ಲಿ ಸಾಮಗ್ರಿಗಳನ್ನ ಇಡಲು ನೆರವಾಗುವಂತೆ ಕ್ಯಾರಿಯರ್​​ಗಳನ್ನ ಇಡಲಾಗಿದೆ. ಹೀಗಾಗಿ ನೀವು ಇದರಲ್ಲಿ ಡೆಲಿವರಿ ಬಾಕ್ಸ್​ಗಳನ್ನ ಅನಾಯಾಸವಾಗಿ ಇಡಬಹುದು.

250 ವ್ಯಾಟ್​ ಎಲೆಕ್ಟ್ರಿಕ್​ ಮೋಟರ್​​ಗಳನ್ನ ಈ ಬೈಕ್​ ಹೊಂದಿದ್ದು ಪ್ರತಿ ಗಂಟೆಗೆ 25 ಕಿಲೋಮೀಟರ್​ ಸಾಮರ್ಥ್ಯದಲ್ಲಿ ಚಲಿಸಲಿದೆ. 48 ವ್ಯಾಟ್​​ನ ಬ್ಯಾಟರಿ ಕ್ಯಾಪಾಸಿಟಿ ಇದ್ದು ಒಂದು ಗಂಟೆಯಲ್ಲಿ ನೀವು 80 ಪ್ರತಿಶತ ಚಾರ್ಜ್​ ಮಾಡಬಹುದಾಗಿದೆ. ಈ ಬೈಕ್​​ನ ವೇಗ ಕಡಿಮೆ ಇರೋದ್ರಿಂದ ನೀವು ಲೈಸೆನ್ಸ್ ಹೊಂದಬೇಕು ಎಂಬ ಅವಶ್ಯಕತೆ ಇರೋದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...