ಕೊರೊನಾ ವೈರಸ್ ವಿರುದ್ಧ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಬಳಕೆಗೆ ತುರ್ತು ಅನುಮೋದನೆ ನೀಡಿರುವ ಕೇಂದ್ರ ಸರ್ಕಾರ ಈಗಾಗಲೇ ದೇಶ್ಯಾದ್ಯಂತ ಅತಿ ದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ನಡೆಸುತ್ತಿದೆ.
ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆಯನ್ನ ನೀಡಲು ಉದ್ದೇಶಿಸಲಾಗಿದೆ.
ಮುಂದಿನ ದಿನಗಳಲ್ಲಿ ನೀವೂ ಕೊರೊನಾ ಲಸಿಕೆಯನ್ನ ಪಡೆಯಬೇಕು ಎಂಬ ಇರಾದೆ ನಿಮ್ಮದಾಗಿದ್ರೆ ನಿಮ್ಮ ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ಲಿಂಕ್ ಮಾಡೋದು ಅನಿವಾರ್ಯವಾಗಿರಲಿದೆ.
ಹಿಂದೂ ಬ್ಯುಸಿನೆಸ್ ರಿಪೋರ್ಟ್ ನೀಡಿರುವ ವರದಿಯ ಪ್ರಕಾರ, ಕೊರೊನಾ ಲಸಿಕೆ ಪಡೆಯುವವರು ಆಧಾರ್ ಕಾರ್ಡ್ಗೆ ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ನೋಂದಾಯಿಸೋದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೇಳಿದೆ ಎನ್ನಲಾಗಿದೆ.
ಕೊರೊನಾ ಲಸಿಕೆಯನ್ನ ಈ ವ್ಯಕ್ತಿ ಪಡೆದಿದ್ದಾರೋ ಇಲ್ಲವೋ ಅನ್ನೋದನ್ನ ಕನ್ಫರ್ಮ್ ಮಾಡಲು ಡಿಜಿಟಲ್ ರೆಕಾರ್ಡ್ ಮಾಡಲಾಗ್ತಿದೆ. ಈ ಡಿಜಿಟಲ್ ರೆಕಾರ್ಡ್ಗೆ ನಾವು ಆಧಾರ್ ಸಂಖ್ಯೆ ನೀಡೋದು ಅನಿವಾರ್ಯ ಎಂದು ಕೋವಿಡ್ -19 ತಂತ್ರಜ್ಞಾನ ಮತ್ತು ದತ್ತಾಂಶ ನಿರ್ವಹಣೆಯ ಗುಂಪಿನ ಅಧ್ಯಕ್ಷ ಡಾ. ಆರ್.ಎಸ್. ಶರ್ಮಾ ಹೇಳಿದ್ದಾರೆ.
ಪ್ರಧಾನಿ ಮೋದಿ ಕೂಡ ಲಸಿಕೆಗೆ ನೋಂದಾಯಿಸಲು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯ ಎಂದು ಈ ಹಿಂದೆಯೇ ಹೇಳಿದ್ದರು. ಹೀಗಾಗಿ ಆಧಾರ್ ಕಾರ್ಡ್ ಹೊಂದಿರುವ ನೀವು ಕೂಡಲೇ ನಿಮ್ಮ ಆಧಾರ್ ಕಾರ್ಡ್ಗೆ ಮೊಬೈಲ್ ನಂಬರ್ ನೋಂದಣಿ ಮಾಡಿಸೋದು ಒಳ್ಳೆಯದು.