alex Certify ‘ಕೊರೊನಾ’ ಲಸಿಕೆ ಪಡೆಯೋದಕ್ಕೂ ಮುನ್ನ ನೀವು ಮಾಡಬೇಕಿದೆ ಈ ಮುಖ್ಯ ಕೆಲಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೊರೊನಾ’ ಲಸಿಕೆ ಪಡೆಯೋದಕ್ಕೂ ಮುನ್ನ ನೀವು ಮಾಡಬೇಕಿದೆ ಈ ಮುಖ್ಯ ಕೆಲಸ…!

ಕೊರೊನಾ ವೈರಸ್​ ವಿರುದ್ಧ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್​ ಬಳಕೆಗೆ ತುರ್ತು ಅನುಮೋದನೆ ನೀಡಿರುವ ಕೇಂದ್ರ ಸರ್ಕಾರ ಈಗಾಗಲೇ ದೇಶ್ಯಾದ್ಯಂತ ಅತಿ ದೊಡ್ಡ ವ್ಯಾಕ್ಸಿನೇಷನ್​ ಡ್ರೈವ್​ ನಡೆಸುತ್ತಿದೆ.

ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆಯನ್ನ ನೀಡಲು ಉದ್ದೇಶಿಸಲಾಗಿದೆ.

ಮುಂದಿನ ದಿನಗಳಲ್ಲಿ ನೀವೂ ಕೊರೊನಾ ಲಸಿಕೆಯನ್ನ ಪಡೆಯಬೇಕು ಎಂಬ ಇರಾದೆ ನಿಮ್ಮದಾಗಿದ್ರೆ ನಿಮ್ಮ ಆಧಾರ್​ ಸಂಖ್ಯೆಗೆ ಮೊಬೈಲ್​ ನಂಬರ್​ ಲಿಂಕ್​ ಮಾಡೋದು ಅನಿವಾರ್ಯವಾಗಿರಲಿದೆ.

ಹಿಂದೂ ಬ್ಯುಸಿನೆಸ್​ ರಿಪೋರ್ಟ್​ ನೀಡಿರುವ ವರದಿಯ ಪ್ರಕಾರ, ಕೊರೊನಾ ಲಸಿಕೆ ಪಡೆಯುವವರು ಆಧಾರ್​ ಕಾರ್ಡ್​ಗೆ ಚಾಲ್ತಿಯಲ್ಲಿರುವ ಮೊಬೈಲ್​ ನಂಬರ್​ ನೋಂದಾಯಿಸೋದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೇಳಿದೆ ಎನ್ನಲಾಗಿದೆ.

ಕೊರೊನಾ ಲಸಿಕೆಯನ್ನ ಈ ವ್ಯಕ್ತಿ ಪಡೆದಿದ್ದಾರೋ ಇಲ್ಲವೋ ಅನ್ನೋದನ್ನ ಕನ್ಫರ್ಮ್​ ಮಾಡಲು ಡಿಜಿಟಲ್​ ರೆಕಾರ್ಡ್​ ಮಾಡಲಾಗ್ತಿದೆ. ಈ ಡಿಜಿಟಲ್​ ರೆಕಾರ್ಡ್​ಗೆ ನಾವು ಆಧಾರ್​ ಸಂಖ್ಯೆ ನೀಡೋದು ಅನಿವಾರ್ಯ ಎಂದು ಕೋವಿಡ್ -19 ತಂತ್ರಜ್ಞಾನ ಮತ್ತು ದತ್ತಾಂಶ ನಿರ್ವಹಣೆಯ ಗುಂಪಿನ ಅಧ್ಯಕ್ಷ ಡಾ. ಆರ್.ಎಸ್. ಶರ್ಮಾ ಹೇಳಿದ್ದಾರೆ.

ಪ್ರಧಾನಿ ಮೋದಿ ಕೂಡ ಲಸಿಕೆಗೆ ನೋಂದಾಯಿಸಲು ಆಧಾರ್​ ಕಾರ್ಡ್ ಹೊಂದಿರುವುದು ಕಡ್ಡಾಯ ಎಂದು ಈ ಹಿಂದೆಯೇ ಹೇಳಿದ್ದರು. ಹೀಗಾಗಿ ಆಧಾರ್​ ಕಾರ್ಡ್​ ಹೊಂದಿರುವ ನೀವು ಕೂಡಲೇ ನಿಮ್ಮ ಆಧಾರ್​ ಕಾರ್ಡ್​ಗೆ ಮೊಬೈಲ್​ ನಂಬರ್​ ನೋಂದಣಿ ಮಾಡಿಸೋದು ಒಳ್ಳೆಯದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...