ಭುವನೇಶ್ವರದ ಚಂದ್ರಶೇಖರಪುರ ಏರಿಯಾದಲ್ಲಿ ಅಪ್ರಾಪ್ತನೊಬ್ಬ ಬೈಕ್ ಸಮೇತ ಆರ್ಟಿಓ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದ. ಡ್ರೈವಿಂಗ್ ಲೈಸೆನ್ಸ್ ಹಾಗೂ ಹೆಲ್ಮೆಟ್ ಇಲ್ಲದೇ ಪ್ರಯಾಣ ಮಾಡಿದ್ದ ಈತನಿಗೆ ಬರೋಬ್ಬರಿ 26 ಸಾವಿರ ರೂಪಾಯಿ ದಂಡವನ್ನ ವಿಧಿಸಲಾಗಿದೆ.
ಮೋಟಾರ್ ವೆಹಿಕಲ್ ಆಕ್ಟ್ 2019ರ ಅಡಿಯಲ್ಲಿ ಇಷ್ಟು ದೊಡ್ಡ ಮೊತ್ತದ ದಂಡವನ್ನ ವಿಧಿಸಲಾಗಿದೆ. ಸೆಕ್ಷನ್ 207ರ ಅಡಿಯಲ್ಲಿ ಮೋಟಾರ್ ಸೈಕಲ್ನ್ನ ಸೀಝ್ ಮಾಡಲಾಗಿದೆ.
ಡ್ರೈವಿಂಗ್ ಲೈಸೆನ್ಸ್ ಹಾಗೂ ಇತರೆ ಮಾಹಿತಿಗಳನ್ನ ನೀಡಲು ಯುವಕ ಶಕ್ತನಾಗದ ಹಿನ್ನೆಲೆಯಲ್ಲಿ ಬೈಕ್ನ್ನ ವಶಕ್ಕೆ ಪಡೆಯಲಾಗಿದೆ. ಇನ್ನು ಈ ಯುವಕನೇ ಬೈಕ್ನ ಮಾಲೀಕನೋ ಇಲ್ಲವೇ ಬೇರೆಯವರಿಗೆ ಸೇರಿದ ಬೈಕ್ ಇದಾಗಿದ್ಯಾ ಅನ್ನೋದರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.