ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಚಿತ್ರರಂಗದಲ್ಲಿ ಡ್ರಗ್ ದಂಧೆ ಪ್ರಕರಣ ಭಾರೀ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತು. ಈಗಾಗಲೇ ಈ ಪ್ರಕರಣದಲ್ಲಿ ಸಾಕಷ್ಟು ಮಂದಿ ಬಾಲಿವುಡ್ ತಾರೆಯರು ವಿಚಾರಣೆಗೆ ಒಳಗಾಗಿದ್ದಾರೆ.
ಈಗಾಗಲೇ ನೀವು ದಿನಪತ್ರಿಕೆಗಳಲ್ಲಿ, ನ್ಯೂಸ್ ಚಾನೆಲ್ಗಳಲ್ಲಿ ಸೆಲಬ್ರಿಟಿಗಳ ಚಾಟ್ ಲಿಸ್ಟ್ನಲ್ಲಿ ಬಯಲಾಯ್ತು ಸತ್ಯ ಎಂಬೆಲ್ಲ ವರದಿಯನ್ನ ಓದಿರ್ತೀರಾ. ಹಾಗಾದ್ರೆ ವಾಟ್ಸಾಪ್ನಲ್ಲಿ ಡಿಲೀಟ್ ಮಾಡಲಾದ ಮೆಸೇಜ್ಗಳನ್ನ ಸೈಬರ್ ಕ್ರೈಂ ಅಧಿಕಾರಿಗಳು ಹೇಗೆ ಪಡೀತಾರೆ ಅನ್ನೋದಕ್ಕೆ ಇಲ್ಲಿದೆ ಮಾಹಿತಿ
ಇವರು 40 ವರ್ಷದ ಮಕರಂದ್ ವಾಘ್. ಸೈಬರ್ ಕ್ರೈಂ ತಜ್ಞರಾಗಿರುವ ಇವರು ತಮ್ಮ ಕೆಲಸದ ಮೂಲಕವೇ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಇವರು ಡ್ರಗ್ ಕೇಸ್ ಸಂಬಂಧ ಬಾಲಿವುಡ್ ತಾರೆಯರ ಡಿಲೀಟ್ ಆದ ವಾಟ್ಸಾಪ್ ಚಾಟ್ಗಳನ್ನ ಕಂಡು ಹಿಡಿಯೋದ್ರ ಮೂಲಕ ಎನ್ಸಿಬಿಗೆ ಮಾಹಿತಿ ನೀಡಿದ್ದಾರೆ.
2016ರಲ್ಲಿ ವಾಘ್ ಮುಂಬೈನ ಪೊಲೀಸ್ ಇಲಾಖೆಯ ಟೆಕ್ನಿಕಲ್ ವಿಂಗ್ನಲ್ಲಿ ಕೆಲಸ ಮಾಡ್ತಿದ್ರು. ಈ ವೇಳೆ ಇವ್ರು ಎಲೆಕ್ಟ್ರಾನಿಕ್ ಫಾರೆನ್ಸಿಕ್ ಅನಾಲಿಸಿಸ್ ಹಾಗೂ ಡಿಜಿಟಲ್ ತನಿಖೆಯನ್ನ ಕಲಿತುಕೊಂಡ್ರು. 2017ರಲ್ಲಿ ಪೊಲೀಸ್ ಇಲಾಖೆ ಸ್ವಯಂ ನಿವೃತ್ತಿ ಪಡೆದ ವಾಘ್, 2020ರಲ್ಲಿ ಮಕಾನ್ಸ್ ಇನ್ಫೋಟೆಕ್ ಎಂಬ ಸ್ವಂತ ಕಂಪನಿಯನ್ನ ಆರಂಭಿಸಿದ್ರು.
ಲಾಕ್ಡೌನ್ ಸಮಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಈ ಕಂಪನಿಗೆ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ ಸಿಕ್ಕಾಪಟ್ಟೆ ಖ್ಯಾತಿಯನ್ನ ತಂದು ಕೊಡ್ತು. ಇದೇ ವಾಘ್, ರಿಯಾ ಚಕ್ರವರ್ತಿಯ ಡಿಲೀಟ್ ಆದ ವಾಟ್ಸಾಪ್ ಸಂದೇಶಗಳನ್ನ ಎನ್ಸಿಬಿಗೆ ಒದಗಿಸಿದ್ದಾರೆ. 120 ವಿವಿಧ ಎಲೆಕ್ಟ್ರಾನಿಕ್ ಸಾಧನಗಳನ್ನ ಬಳಸಿ ಈ ವಾಟ್ಸಾಪ್ ಸಂದೇಶಗಳನ್ನ ಮರು ಪಡೆಯಲಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ವಾಘ್, ಈಗಿನ ಕಾಲದಲ್ಲಿ ನಿಮ್ಮ ಎಲೆಕ್ಟ್ರಾನಿಕ್ ಡಿವೈಸ್ಗಳಲ್ಲಿ ಇರುವ ಮಾಹಿತಿಯೇ ನಿಮ್ಮ ಬಹುದೊಡ್ಡ ಶತ್ರುವಾಗಬಹುದು. ಈಗೆಲ್ಲ ಅಪರಾಧಿ ತಾನಾಗಿಯೇ ಮಾಡಿದ ಅಪರಾಧವನ್ನ ಒಪ್ಪಿಕೊಳ್ಳಬೇಕು ಎಂದೇನಿಲ್ಲ. ನಮ್ಮ ಮೊಬೈಲ್ಗಳೇ ನಮ್ಮ ಎಲ್ಲಾ ಗುಟ್ಟುಗಳನ್ನ ಬಿಚ್ಚಿಡ್ತಾವೆ ಎಂದು ಹೇಳಿದ್ರು.