ನಾಯಿಗಳು ಅದೆಷ್ಟರ ಮಟ್ಟಿಗೆ ತಮ್ಮನ್ನು ಸಾಕಿದ ಮಂದಿಯೊಂದಿಗೆ ಭಾವನಾತ್ಮಕವಾಗಿ ಬೆರೆಯುತ್ತವೆ ಎಂದು ಸಾಕಷ್ಟು ನಿದರ್ಶನಗಳನ್ನು ಕಂಡಿದ್ದೇವೆ.
ತನ್ನ ಮಾಲೀಕನಿಗೆ ಕಾಲು ಮುರಿದ ಕಾರಣ ನಾಯಿಯೊಂದು ಆತನಿಗೆ ತೋರಿದ ಸಿಂಪತಿಯ ಕಥೆ ನೆಟ್ಟಿಗರ ಹೃದಯ ಗೆಲ್ಲುತ್ತಿದೆ.
ಪದೇ ಪದೇ ಕುಂಟುತ್ತಿದ್ದ ತನ್ನ ನಾಯಿಯನ್ನು ಕಂಡ ಮಾಲೀಕ ಅದರ ವೈದ್ಯಕೀಯ ಪರೀಕ್ಷೆಗೆಂದು 300 ಪೌಂಡ್ (29,800 ರೂಗಳು) ವ್ಯಯಿಸಿದ್ದಾರೆ. ಆದರೆ ತಮ್ಮ ಕಾಲನ್ನು ಫ್ರಾಕ್ಷರ್ ಮಾಡಿಕೊಂಡ ಮಾಲೀಕನ ಮೇಲಿನ ಸಿಂಪತಿಗೆ ತಾನೂ ಸಹ ಹಾಗೆ ನಡೆಯುತ್ತಿದೆ ಈ ನಾಯಿ ಎಂದು ಇಷ್ಟೆಲ್ಲಾ ಆದ ಮೇಲೆ ಗೊತ್ತಾಗಿದೆ.
ಲಂಡನ್ ನಿವಾಸಿಯಾದ ರಸೆಲ್ ಜೋನ್ಸ್ ತಮ್ಮ ಸಾಕುನಾಯಿ ಬಿಲ್ ಕಾಲು ಮುರಿದುಕೊಂಡಿರಬಹುದು ಎಂದು ಭಾವಿಸಿ, ಎಕ್ಸ್ರೇ ಎಲ್ಲವನ್ನೂ ತೆಗೆಸಿ ನೋಡಿದ್ದಾರೆ. ಆದರೆ ಯಾವ ಸ್ಕ್ಯಾನಿಂಗ್ನಲ್ಲೂ ಶ್ವಾನಕ್ಕೆ ದೈಹಿಕ ಸಮಸ್ಯೆ ಇದೆ ಎಂದು ಕಂಡು ಬಂದಿಲ್ಲ.
ರಸೆಲ್ ಹಾಗೂ ಬಿಲ್ ಒಟ್ಟಿಗೇ ನಡೆದುಕೊಂಡು ಸಾಗುತ್ತಿರುವ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದೆ. ವಿಡಿಯೋದಲ್ಲಿ ತನ್ನ ಮಾಲೀಕನ ಹಾಗೇ ತಾನೂ ನಡೆಯಲು ನೋಡುತ್ತಿರುವ ಬಿಲ್ನನ್ನು ನೋಡಬಹುದಾಗಿದೆ.