alex Certify ಒಡಿಶಾ ಗ್ರಾಮಸ್ಥರ ಶ್ರಮದಿಂದ ಜಗತ್ತಿನೆಲ್ಲೆಡೆ ಪಸರಿಸುತ್ತಿದೆ ಈ ಪಾರಂಪರಿಕ ಕಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಡಿಶಾ ಗ್ರಾಮಸ್ಥರ ಶ್ರಮದಿಂದ ಜಗತ್ತಿನೆಲ್ಲೆಡೆ ಪಸರಿಸುತ್ತಿದೆ ಈ ಪಾರಂಪರಿಕ ಕಲೆ

'It is Our Duty': How Professionals in Odisha's Puri Are Keeping the Art of Pattachitra Alive

ಒಡಿಶಾದ ಪುರಿ ಬಳಿ ಇರುವ ರಘುರಾಜ್ಪುರ ಗ್ರಾಮವು ತನ್ನ ’ಪಟ್ಟಚಿತ್ರ’ ಕಲೆಯಿಂದ ದೇಶ ವಿದೇಶಗಳಲ್ಲಿ ಹೆಸರು ಮಾಡಿದೆ.

ರಾಜ್ಯದ ಪ್ರಮುಖ ಪ್ರವಾಸೀ ತಾಣಗಳಿಗೆ ಭೇಟಿ ಕೊಡುವ ಪ್ರವಾಸಿಗರು, ಈ ಕಲೆ ಝಲಕ್‌ ಒಂದನ್ನು ತಮ್ಮೊಂದಿಗೆ ನೆನಪಿಗೆ ಕೊಂಡೊಯ್ಯಲು ಈ ಊರಿಗೆ ಬರುತ್ತಾರೆ. ಪಟ್ಟ = ಬಟ್ಟೆ; ಚಿತ್ರ = ಕಲೆ, ಬಟ್ಟೆಯ ಮೇಲೆ ಮೂಡಿದ ಕಲೆಗೆ ’ಪಟ್ಟಚಿತ್ರ’ ಎಂದು ಕರೆಯಲಾಗುತ್ತದೆ. ಪೌರಾಣಿಕ ಕಥೆಗಳ ಅನೇಕ ಪ್ರಸಂಗಳನ್ನು ಬಟ್ಟೆಗಳ ಮೇಲೆ ಚಿತ್ರದ ರೂಪದಲ್ಲಿ ಬಿತ್ತರಿಸುವ ಪಟ್ಟಚಿತ್ರ ಕಲಾವಿದರ ಕೌಶಲ್ಯ ಭಾರೀ ನಾಜೂಕಾದದ್ಧು.

ಈ ಊರಿನಲ್ಲಿ ಹುಟ್ಟಿ ಬೆಳೆದ ಹುಡುಗರು ಚಾರ್ಟಡ್‌ ಅಕೌಂಟೆಂಟ್, ಸಂಚಾರೀ ಪೊಲೀಸ್ ಅಧಿಕಾರಿ, ಸ್ನಾತಕೋತ್ತರ ಪದವೀಧರರಾದರೂ ಸಹ ತಮ್ಮೂರಿನ ಗ್ರಾಮಸ್ಥರು ತಲೆಮಾರುಗಳಿಂದ ಉಳಿದುಕೊಂಡು ಬಂದ ಪಟ್ಟಚಿತ್ರ ಪರಂಪರೆಗೆ ತಮ್ಮದೇ ಆದ ಕೊಡುಗೆ ನೀಡುವ ಒಂದೇ ಒಂದು ಅವಕಾಶವನ್ನೂ ಬಿಡುವುದಿಲ್ಲ. ಈ ಕಾರಣದಿಂದ ಪಟ್ಟಚಿತ್ರ ಕಲೆಯ ಶ್ರೀಮಂತಿಕೆಯು 21ನೇ ಶತಮಾನದಲ್ಲೂ ತನ್ನ ಬೇರುಗಳನ್ನು ಗಟ್ಟಿಯಾಗಿ ಇಟ್ಟುಕೊಂಡಿದೆ.

ಊರಿನಲ್ಲಿ 160 ಮನೆಗಳಿದ್ದು, ಈ ಎಲ್ಲಾ ಮನೆಗಳಲ್ಲೂ ಸಹ ಪಟ್ಟಚಿತ್ರ ಕಲೆಯನ್ನು ಪೂಜ್ಯನೀಯ ಭಾವದಿಂದ ಸ್ವೀಕರಿಸಿದ್ದು, ಈ ಕಲೆಯನ್ನು ಸಂಪ್ರದಾಯವನ್ನಾಗಿ ಮಾಡಿಕೊಳ್ಳಲಾಗಿದೆ.

ಪಾರಂಪರಿಕ ಗ್ರಾಮವಾದ ರಘುರಾಜ್ಪುರದಲ್ಲಿ ಇನ್ನಷ್ಟು ಪ್ರವಾಸೀ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿ, ಜಗತ್ತಿನ ಎಲ್ಲೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಈ ಊರಿಗೆ ಆಕರ್ಷಿಸಲು ಸರ್ಕಾರ ಯೋಜನೆಗಳನ್ನು ಹೊಂದಿದೆ ಎನ್ನುತ್ತಾರೆ ಒಡಿಶಾ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ವಿಶಾಲ್ ಕೆ ದೇವ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...