ಲಡಾಖ್ ಗಡಿಯಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೈನಿಕರು ಹಾಗೂ ವೈದ್ಯಕೀಯ ಸಿಬ್ಬಂದಿ ಮೊದಲ ಹಂತದ ಕೊರೊನಾ ಲಸಿಕೆಯನ್ನ ಪಡೆಯಲಿದ್ದಾರೆ. ದೇಶದಲ್ಲಿ ಇಂದು ಆರಂಭವಾಗಿರುವ ಕೊರೊನಾ ಲಸಿಕೆ ಹಂಚಿಕೆ ಪ್ರಕ್ರಿಯೆಯ ವೇಳೆ ಈ ಸಿಬ್ಬಂದಿಯನ್ನ ಮೊದಲ ಆದ್ಯತೆಯ ಗುಂಪಿಗೆ ಸೇರಿಸಿ ಲಸಿಕೆ ನೀಡಲಾಗ್ತಿದೆ.
ಲಡಾಖ್ ಗಡಿಗೆ 12 ಸಾವಿರಕ್ಕೂ ಹೆಚ್ಚು ಕೊರೊನಾ ಲಸಿಕೆಗಳನ್ನ ಕಳುಹಿಸಿಕೊಡಲಾಗಿದೆ. ಭಾರತ ಹಾಗೂ ಚೀನಾ ನಡುವೆ ಗಡಿ ಉದ್ವಿಗ್ನತೆ ಶುರುವಾದಾಗಿನಿಂದ ಈ ಸಿಬ್ಬಂದಿ ಕಣ್ಣಲ್ಲಿ ಕಣ್ಣಿಟ್ಟು ದೇಶದ ಗಡಿಯನ್ನ ಕಾಯುತ್ತಿದ್ದಾರೆ. ಹೀಗಾಗಿ ಭಾರತೀಯ ಯೋಧರು ಸೇರಿದಂತೆ 4000 ಮಂದಿಗೆ ಕೊರೊನಾ ಲಸಿಕೆ ನೀಡಲಾಗುತ್ತೆ.
ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ಹಂಚಿಕೆಯಲ್ಲಿ ಮೊದಲ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ ಶನಿವಾರ 3 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಿದೆ. ಮೊದಲ ಹಂತದ ಕೊರೊನಾ ಲಸಿಕೆಯ ಪಟ್ಟಿಯಲ್ಲಿ ದೇಶದ 30 ಮಿಲಿಯನ್ ಮಂದಿ ಮುಂಚೂಣಿ ನೌಕರರು ಇದ್ದಾರೆ.