ಇಟಲಿಯ ವೆನಿಸ್ನಲ್ಲಿ ಕೋವಿಡ್ ಸಾಂಕ್ರಾಮಿಕ ಬಳಿಕ ಪ್ರವಾಸೋದ್ಯಮದಲ್ಲಿ ಬಹಳಷ್ಟು ಬದಲಾವಣೆಗಳನ್ನ ಮಾಡಲಾಗಿದೆ. ನಿಮ್ಮ ಮೊಬೈಲ್ನ್ನ ಟ್ರ್ಯಾಕ್ ಮಾಡುವ ಮೂಲಕ ವೆನಿಸ್ನ ಯಾವುದೇ ಮೂಲೆಯಲ್ಲಿ ಇದ್ದರೂ ನಿಖರವಾಗಿ ಚಲನವಲನಗಳನ್ನ ಅಳೆಯಲಾಗುತ್ತದೆ.
ಕೋವಿಡ್ 19ಗೂ ಮುನ್ನ ವೆನಿಸ್ಗೆ ಲೆಕ್ಕವಿಲ್ಲದಷ್ಟು ಪ್ರವಾಸಿಗರು ಆಗಮಿಸುತ್ತಿದ್ದರು. ಪ್ರವಾಸಿಗರನ್ನ ನಿಯಂತ್ರಣ ಮಾಡೋಕೆ ಅಧಿಕಾರಿಗಳು ಈವರೆಗೆ ಸಾಕಷ್ಟು ಕ್ರಮಗಳನ್ನ ಜಾರಿಗೆ ತಂದಿದ್ದಾರೆ. 2020ರಲ್ಲಿ ಆರಂಭವಾಗಬೇಕಿದ್ದ ಪ್ರವಾಸಿ ತೆರಿಗೆ ವ್ಯವಸ್ಥೆಯನ್ನ ಸದ್ಯ 2022ಕ್ಕೆ ಮುಂದೂಡಲಾಗಿದೆ.
ಆದರೆ ಏನಾದರೂ ಮಾಡಿ ಪ್ರವಾಸಿಗರ ಚಲನವಲನದ ಮೇಲೆ ಕಣ್ಣಿಡಬೇಕೆಂದು ಅಧಿಕಾರಿಗಳು ಯೋಚನೆ ನಡೆಸುತ್ತಲೇ ಇದ್ದರು. ಹಲವಾರು ದಿನಗಳವರೆಗೆ ನೆಲೆ ನಿಲ್ಲೋ ಪ್ರವಾಸಿಗರು ಎಲ್ಲಿಗೆ ಹೋಗ್ತಾರೆ ಎಲ್ಲಿಗೆ ಬರ್ತಾರೆ ಅನ್ನೋದ್ರ ಬಗ್ಗೆ ಕಣ್ಣಿಡೋದಕ್ಕಾಗಿ ಇದೀಗ ಕಂಟ್ರೋಲ್ ಟವರ್ನ್ನ ಸ್ಥಾಪನೆ ಮಾಡಲಾಗಿದೆ.
ಇಲ್ಲಿ ದೊಡ್ಡ ಸಿಸಿ ಟಿವಿ ರೂಮಗಳನ್ನ ಇಡಲಾಗಿದ್ದು ಇದರಲ್ಲಿ ನಗರದ ಪ್ರತಿಯೊಂದು ಮೂಲೆಯ ದೃಶ್ಯವನ್ನೂ ನೋಡಬಹುದಾಗಿದೆ. ಈ ಸಿಸಿ ಟಿವಿ ರೂಮ್ನಲ್ಲಿರುವ ಪೊಲೀಸರು ಈ ಕೊಠಡಿಯಲ್ಲೇ ಕೂತು ಸಂಪೂರ್ಣ ನಗರದ ಮೇಲೆ ಕಣ್ಣಿಡ್ತಾರೆ.
ಪ್ರತಿಯೊಂದು ಕಡೆಗಳಲ್ಲಿ ಕಂಟ್ರೋಲ್ ರೂಮ್ಗಳನ್ನ ಸ್ಥಾಪನೆ ಮಾಡಲಾಗಿದೆ. ಈ ಕಂಟ್ರೋಲ್ ರೂಮ್ನ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡ್ತಾರೆ. ಇದರಿಂದಾಗಿ ಪ್ರವಾಸಿಗರಿಗೆ ಶುಲ್ಕವನ್ನ ವಿಧಿಸೋದು ಇನ್ನಷ್ಟು ಸುಲಭವಾಗುತ್ತೆ. ಅಂತಿಮವಾಗಿ ವೆನಿಸಾದ ಪ್ರವಾಸೋದ್ಯಮವನ್ನ ಇನ್ನಷ್ಟು ಅಭಿವೃದ್ಧಿ ಪಡಿಸಲು ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ನಂಬಿದ್ದಾರೆ.