alex Certify ಈ ನಗರದಲ್ಲಿ ಪ್ರತಿಯೊಬ್ಬ ಪ್ರವಾಸಿಗನ ಮೇಲೆ ಇಡಲಾಗುತ್ತೆ ಹದ್ದಿನ ಕಣ್ಣು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ನಗರದಲ್ಲಿ ಪ್ರತಿಯೊಬ್ಬ ಪ್ರವಾಸಿಗನ ಮೇಲೆ ಇಡಲಾಗುತ್ತೆ ಹದ್ದಿನ ಕಣ್ಣು…!

Venice is Watching Tourists' Every Move with Phone Tracking and CCTV Cameras, Here's Whyಇಟಲಿಯ ವೆನಿಸ್​​​ನಲ್ಲಿ ಕೋವಿಡ್​​ ಸಾಂಕ್ರಾಮಿಕ ಬಳಿಕ ಪ್ರವಾಸೋದ್ಯಮದಲ್ಲಿ ಬಹಳಷ್ಟು ಬದಲಾವಣೆಗಳನ್ನ ಮಾಡಲಾಗಿದೆ. ನಿಮ್ಮ ಮೊಬೈಲ್​ನ್ನ ಟ್ರ್ಯಾಕ್​ ಮಾಡುವ ಮೂಲಕ ವೆನಿಸ್​ನ ಯಾವುದೇ ಮೂಲೆಯಲ್ಲಿ ಇದ್ದರೂ ನಿಖರವಾಗಿ ಚಲನವಲನಗಳನ್ನ ಅಳೆಯಲಾಗುತ್ತದೆ.

ಕೋವಿಡ್​ 19ಗೂ ಮುನ್ನ ವೆನಿಸ್​ಗೆ ಲೆಕ್ಕವಿಲ್ಲದಷ್ಟು ಪ್ರವಾಸಿಗರು ಆಗಮಿಸುತ್ತಿದ್ದರು. ಪ್ರವಾಸಿಗರನ್ನ ನಿಯಂತ್ರಣ ಮಾಡೋಕೆ ಅಧಿಕಾರಿಗಳು ಈವರೆಗೆ ಸಾಕಷ್ಟು ಕ್ರಮಗಳನ್ನ ಜಾರಿಗೆ ತಂದಿದ್ದಾರೆ. 2020ರಲ್ಲಿ ಆರಂಭವಾಗಬೇಕಿದ್ದ ಪ್ರವಾಸಿ ತೆರಿಗೆ ವ್ಯವಸ್ಥೆಯನ್ನ ಸದ್ಯ 2022ಕ್ಕೆ ಮುಂದೂಡಲಾಗಿದೆ.

ಆದರೆ ಏನಾದರೂ ಮಾಡಿ ಪ್ರವಾಸಿಗರ ಚಲನವಲನದ ಮೇಲೆ ಕಣ್ಣಿಡಬೇಕೆಂದು ಅಧಿಕಾರಿಗಳು ಯೋಚನೆ ನಡೆಸುತ್ತಲೇ ಇದ್ದರು. ಹಲವಾರು ದಿನಗಳವರೆಗೆ ನೆಲೆ ನಿಲ್ಲೋ ಪ್ರವಾಸಿಗರು ಎಲ್ಲಿಗೆ ಹೋಗ್ತಾರೆ ಎಲ್ಲಿಗೆ ಬರ್ತಾರೆ ಅನ್ನೋದ್ರ ಬಗ್ಗೆ ಕಣ್ಣಿಡೋದಕ್ಕಾಗಿ ಇದೀಗ ಕಂಟ್ರೋಲ್​ ಟವರ್​ನ್ನ ಸ್ಥಾಪನೆ ಮಾಡಲಾಗಿದೆ.

ಇಲ್ಲಿ ದೊಡ್ಡ ಸಿಸಿ ಟಿವಿ ರೂಮಗಳನ್ನ ಇಡಲಾಗಿದ್ದು ಇದರಲ್ಲಿ ನಗರದ ಪ್ರತಿಯೊಂದು ಮೂಲೆಯ ದೃಶ್ಯವನ್ನೂ ನೋಡಬಹುದಾಗಿದೆ. ಈ ಸಿಸಿ ಟಿವಿ ರೂಮ್​ನಲ್ಲಿರುವ ಪೊಲೀಸರು ಈ ಕೊಠಡಿಯಲ್ಲೇ ಕೂತು ಸಂಪೂರ್ಣ ನಗರದ ಮೇಲೆ ಕಣ್ಣಿಡ್ತಾರೆ.

ಪ್ರತಿಯೊಂದು ಕಡೆಗಳಲ್ಲಿ ಕಂಟ್ರೋಲ್​ ರೂಮ್​ಗಳನ್ನ ಸ್ಥಾಪನೆ ಮಾಡಲಾಗಿದೆ. ಈ ಕಂಟ್ರೋಲ್​ ರೂಮ್​ನ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡ್ತಾರೆ. ಇದರಿಂದಾಗಿ ಪ್ರವಾಸಿಗರಿಗೆ ಶುಲ್ಕವನ್ನ ವಿಧಿಸೋದು ಇನ್ನಷ್ಟು ಸುಲಭವಾಗುತ್ತೆ. ಅಂತಿಮವಾಗಿ ವೆನಿಸಾದ ಪ್ರವಾಸೋದ್ಯಮವನ್ನ ಇನ್ನಷ್ಟು ಅಭಿವೃದ್ಧಿ ಪಡಿಸಲು ಈ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ನಂಬಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...