alex Certify ಪೊಂಗಲ್​ ಹಬ್ಬದ ಮುನ್ನಾದಿನ ಪೌರ ಕಾರ್ಮಿಕರಿಗೆ ಚೆನ್ನೈ ಕಾರ್ಪೋರೇಶನ್​ನಿಂದ ಬಿಗ್​ ಶಾಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಂಗಲ್​ ಹಬ್ಬದ ಮುನ್ನಾದಿನ ಪೌರ ಕಾರ್ಮಿಕರಿಗೆ ಚೆನ್ನೈ ಕಾರ್ಪೋರೇಶನ್​ನಿಂದ ಬಿಗ್​ ಶಾಕ್​..!

ಕೋವಿಡ್​ ಸಂಕಷ್ಟದ ನಡುವೆಯೂ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದ ತಮಿಳುನಾಡಿನ 700 ಪೌರ ಕಾರ್ಮಿಕರನ್ನ ಯಾವುದೇ ಸೂಚನೆ ನೀಡದೇ ಕೆಲಸದಿಂದ ಕಿತ್ತೆಸೆಯಲಾಗಿದೆ. ಪೊಂಗಲ್​ ಹಬ್ಬದ ಸಂಭ್ರಮದಲ್ಲಿರಬೇಕಿದ್ದ ಕಾರ್ಮಿಕರಿಗೆ ಚೆನ್ನೈ ಕಾರ್ಪೋರೇಶನ್​​ನ ಈ ನಿರ್ಧಾರ ಬರಸಿಡಿಲು ಬಡಿದಂತಾಗಿದೆ.

ಕೋವಿಡ್​ 19 ನಡುವೆಯೂ ಜೀವದ ಹಂಗು ತೊರೆದು ಕೆಲಸ ಮಾಡಿದ್ದ ಕಾರ್ಮಿಕರಿಗೆ ಚೆನ್ನೈ ಕಾರ್ಪೋರೇಷನ್ ಈ ಶಿಕ್ಷೆಯನ್ನ ನೀಡಿದೆ. ಕೆಲಸ ಕಳೆದುಕೊಂಡವರಲ್ಲಿ ಕಳೆದ ಕೆಲ ದಶಕಗಳಿಂದ ಕೆಲಸ ಸಲ್ಲಿಸುತ್ತಿದ್ದ ಪೌರ ಕಾರ್ಮಿಕರೂ ಸೇರಿದ್ದಾರೆ.

ಚೆನ್ನೈ ಕಾರ್ಪೋರೇಷನ್​ ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣಾ ಕೆಲಸವನ್ನ ಖಾಸಗಿ ಕಾಂಟ್ರ್ಯಾಕ್ಟರ್​ಗಳಿಗೆ ನೀಡಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗ್ತಿದೆ. ಇನ್ನು ಈ ಬಗ್ಗೆ ಮಾತನಾಡಿದ ಪೌರ ಕಾರ್ಮಿಕರೊಬ್ಬರು, ಕೊರೊನಾ ವ್ಯಾಪಕವಾಗಿ ಹರಡಲು ಆರಂಭವಾಗಿದ್ದ ಸಂದರ್ಭದಲ್ಲೂ ನಾವು ಕೆಲಸವನ್ನ ಮುಂದುವರಿಸಿದ್ದೆವು. ಜೀವದ ಹಂಗನ್ನ ತೊರೆದು ಕೊರೊನಾ ರೋಗಿಗಳು ಇರುತ್ತಿದ್ದ ವಾರ್ಡ್​ಗಳಿಗೂ ಹೋಗಿ ಕೆಲಸ ಮಾಡಿದ್ದೇವೆ ಎಂದು ಹೇಳಿದ್ರು.

ಇದೇ ವಿಚಾರವಾಗಿ ಮಾತನಾಡಿದ ಮತ್ತೊಬ್ಬ ಪೌರ ಕಾರ್ಮಿಕೆ, ಪೌರ ಕಾರ್ಮಿಕರಾಗಿದ್ದ ನನ್ನ ಪತಿ ನಿಧನರಾದ ಬಳಿಕ ನನಗೆ ಈ ಕೆಲಸವನ್ನ ಕೊಡಲಾಗಿತ್ತು. ನಾನು ಕೊರೊನಾ ಸಂಕಷ್ಟ, ಸೈಕ್ಲೋನ್​ ಕಾಟದ ನಡುವೆಯೂ ನನ್ನ ಕರ್ತವ್ಯವನ್ನ ನಿರ್ವಹಿಸಿದ್ದೆ. ಆದರೂ ನಮಗೆ ಈ ರೀತಿ ಮೋಸ ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕಿದ್ರು.

ಈ ಸಂಬಂಧ ಟ್ವೀಟ್​ ಮಾಡಿರುವ ಡಿಎಂಕೆ ಸಂಸದ ಕನಿಮೋಳಿ, ತಮಿಳುನಾಡು ಪಳನಿಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೋವಿಡ್​ ಯೋಧರನ್ನ ಈ ರೀತಿ ನಡೆಸುಕೊಳ್ಳುತ್ತಿರುವ ಕ್ರಮ ಸರಿ ಇಲ್ಲ ಎಂದು ಖಂಡಿಸಿದ್ದಾರೆ. ತ್ಯಾಜ್ಯ ನಿರ್ವಹಣೆ ವಿಭಾಗ ಖಾಸಗಿ ವಿಭಾಗಕ್ಕೆ ಶಿಫ್ಟ್ ಆಗ್ತಾ ಇರೋದ್ರಿಂದ ಭವಿಷ್ಯದಲ್ಲಿ 3000 ಮಂದಿ ಉದ್ಯೋಗ ಕಡಿತವಾಗಲಿದೆ ಎಂದು ಅಂದಾಜಿಸಲಾಗಿದೆ.

— Shabbir Ahmed (@Ahmedshabbir20) January 12, 2021

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...