ಮಗ ಸತ್ತು ಒಂದು ವರ್ಷದ ಬಳಿಕ ತಾಯಿಗೆ ಆಕೆಯ ಪುತ್ರ ಬರೆದಿದ್ದ ಸೂಸೈಡ್ ನೋಟ್ ಸಿಕ್ಕ ವಿಚಿತ್ರ ಘಟನೆ ವರದಿಯಾಗಿದೆ. ಆತ್ಮಹತ್ಯೆ ಪತ್ರದಲ್ಲಿ ಆತ ತಾನು ಈ ಹೆಜ್ಜೆ ಇಡಲು ಪ್ರಚೋದನೆ ನೀಡಿದ ಕಾರಣ ಏನೆಂಬುದನ್ನ ಬಹಿರಂಗಪಡಿಸಿದ್ದಾನೆ.
ಲೀಲಾ ಜಾಧವ್ ಎಂಬ ಮಹಿಳೆಯ 42 ವರ್ಷದ ಪುತ್ರ ಕಳೆದ ವರ್ಷ ಏಪ್ರಿಲ್ 9ರಂದು ಆತ್ಮಹತ್ಯೆಗೆ ಶರಣಾಗಿದ್ದ. ಆತ ಆತ್ಮಹತ್ಯೆಗೆ ಶರಣಾಗಿ ಒಂದು ದಿನದ ಬಳಿಕ ನರ್ಮದಾ ಕಾಲುವೆಯಿಂದ ಆತನ ಶವವನ್ನ ಹೊರತೆಗೆಯಲಾಗಿತ್ತು.
ಆದರೆ ತನ್ನ ಮಗ ಯಾಕೆ ಈ ರೀತಿ ಮಾಡಿಕೊಂಡಿದ್ದಾನೆ ಅನ್ನೋದ್ರ ಬಗ್ಗೆ ಲೀಲಾ ಜಾಧವ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆದರೆ ಮಗ ಸತ್ತು ವರ್ಷ ಕಳೆಯಲು ಇನ್ನೇನು ಕೆಲವೇ ತಿಂಗಳು ಬಾಕಿ ಇರುವಾಗ ಮಗ ಬರೆದಿದ್ದ ಡೆತ್ ನೋಟ್ ಲಭಿಸಿದೆ.
ಜನವರಿ ತಿಂಗಳ ಮೊದಲ ವಾರದಲ್ಲಿ ಲೀಲಾ ಮಗನಿಗೆ ಸೇರಿದ್ದ ಕಪಾಟನ್ನ ಸ್ವಚ್ಛ ಮಾಡುತ್ತಿದ್ದ ವೇಳೆ ಈ ಡೆತ್ ನೋಟ್ ಲಭ್ಯವಾಗಿದೆ. ಬೆಡ್ಶೀಟ್ನ ಮಡಿಕೆಗಳ ಅಡಿಯಲ್ಲಿ ಈ ಪತ್ರ ಲಭ್ಯವಾಗಿದೆ.
ಇದರಲ್ಲಿ ಆತ ತನ್ನ ಆತ್ಮಹತ್ಯೆ ಹಿಂದಿನ ಕಾರಣ ತಿಳಿಸಿದ್ದು, ಪತ್ನಿ ತನ್ನ ಮುಂದೆಯೇ ಪರಪುರುಷನೊಂದಿಗೆ ಚಕ್ಕಂದವಾಡುತ್ತಿದ್ದಳು. ಈ ಕುರಿತು ತಿಳಿ ಹೇಳಿದ ವೇಳೆ ನೀನು ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥ ಎಂದು ಹಂಗಿಸುತ್ತಿದ್ದಳು ಎಂದು ಹೇಳಿದ್ದಾನೆ. ಇದರಿಂದ ಮನನೊಂದು ತಾನು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ತಿಳಿಸಿದ್ದಾನೆ.