ಕೊರೋನಾ ಉಗಮ ಸ್ಥಾನ ಚೀನಾದಲ್ಲಿ ಸೋಂಕು ತಡೆಗೆ ಅಭಿವೃದ್ಧಿಪಡಿಸಲಾದ ಸಿನೋವಾಕ್ ಲಸಿಕೆ ಕಡಿಮೆ ಪರಿಣಾಮಕಾರಿ ಎಂಬುದು ಸಾಬೀತಾಗಿದೆ.
ಚೀನಾ ತಯಾರಿಸಿದ ಸಿನೋವಾಕ್ ಕೋವಿಡ್ ಲಸಿಕೆ ಕಳೆದ ವಾರ ಶೇಕಡ 78 ರಷ್ಟು ಪರಿಣಾಮಕಾರಿಯೆಂದು ಬ್ರೆಜಿಲ್ ಸಂಶೋಧಕರು ಹೇಳಿದ್ದು, ಈಗ ಕೇವಲ ಶೇಕಡ 50.4 ರಷ್ಟು ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಶೇಕಡ 60 ಕ್ಕಿಂತ ಹೆಚ್ಚು ಪರಿಣಾಮಕಾರಿ ಲಸಿಕೆಯನ್ನು ಬಳಸುವಂತೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಕೊರೋನಾ ಲಸಿಕೆ ಬಳಕೆ ಬಗ್ಗೆ ಸಲಹೆ ನೀಡಲಾಗಿದೆ.