alex Certify ಬಾಹ್ಯಾಕಾಶ‌ ತಲುಪಬೇಕಿದ್ದ ಸಮೋಸಾ ಲ್ಯಾಂಡ್‌ ಆಗಿದ್ದೆಲ್ಲಿ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಹ್ಯಾಕಾಶ‌ ತಲುಪಬೇಕಿದ್ದ ಸಮೋಸಾ ಲ್ಯಾಂಡ್‌ ಆಗಿದ್ದೆಲ್ಲಿ ಗೊತ್ತಾ…?

ಬ್ರಿಟನ್​ನಲ್ಲಿರುವ ಭಾರತೀಯ ಮೂಲದ ರೆಸ್ಟಾರೆಂಟ್​​ ಒಂದು ಸಮೋಸಾವನ್ನ ಬಾಹ್ಯಾಕಾಶಕ್ಕೆ ಕಳುಹಿಸುವ ಪ್ರಯತ್ನ ಮಾಡಿದೆ. ಈ ಸಮೋಸಾ ಹೊತ್ತೊಯ್ದ ಏರ್​ ಬಲೂನ್ ಫ್ರಾನ್ಸ್​ನಲ್ಲಿ ಲ್ಯಾಂಡ್ ಆಗಿದೆ. ಬ್ರಿಟನ್​ನ ಪ್ರತಿಷ್ಟಿತ ರೆಸ್ಟಾರೆಂಟ್​ಗಳಲ್ಲೊಂದಾದ ಚಾಯ್​ ವಾಲಾ ಮೂರು ಪ್ರಯತ್ನಗಳ ಬಳಿಕ ಈ ಪ್ರಯೋಗವನ್ನ ಮಾಡುವಲ್ಲಿ ಯಶಸ್ವಿಯಾಗಿದೆ.

ಚಾಯ್​ವಾಲಾ ರೆಸ್ಟೊರೆಂಟ್​ ಮಾಲೀಕರಾದ ನೀರಜ್​ ಗಧೇರ್​, ನಾನೊಮ್ಮೆ ಸಮೋಸವನ್ನ ಬಾಹ್ಯಾಕಾಶಕ್ಕೆ ಕಳುಹಿಸುವ ಬಗ್ಗೆ ತಮಾಷೆಯ ಮಾತುಗಳನ್ನಾಡಿದ್ದೆ. ಬಳಿಕ ಈ ಪ್ರಯೋಗವನ್ನ ಮಾಡುವ ಮೂಲಕ ನಾನ್ಯಾಕೆ ಎಲ್ಲರನ್ನೂ ನಗಿಸಬಾರದು ಎಂದು ಯೋಚಿಸಿ ಈ ಕೆಲಸ ಮಾಡಿದೆ ಎಂದು ಹೇಳಿದ್ರು.

ಸಮೋಸಾವನ್ನ ಬಾಹ್ಯಾಕಾಶಕ್ಕೆ ಕಳುಹಿಸಲು ನೀರಜ್​ ಹೀಲಿಯಂ ತುಂಬಿದ ಬಲೂನುಗಳನ್ನ ಬಳಕೆ ಮಾಡಿದ್ದಾರೆ. ಸಮೋಸಾವನ್ನ ಸರಿಯಾಗಿ ಟೇಕ್​ಆಪ್​ ಮಾಡಲು ನೀರಜ್​ ಮೂರು ಪ್ರಯತ್ನಗಳನ್ನ ಮಾಡಬೇಕಾಯ್ತು. ಮೊದಲ ಪ್ರಯತ್ನದಲ್ಲಿ ಹೀಲಿಯಂ ಬಲೂಮ್​ ಅವರ ಕೈ ತಪ್ಪಿ ಹೋಗಿತ್ತು. ಎರಡನೇ ಪ್ರಯತ್ನದ ವೇಳೆ ಹೀಲಿಯಂ ಕೊರತೆ ಉಂಟಾಯ್ತು. ಮೂರನೇ ಪ್ರಯತ್ನದಲ್ಲಿ ಸಮೋಸಾ ಟೇಕಾಫ್​ ಆಯ್ತು. ಜಿಪಿಎಸ್​ ಟ್ರಾಕರ್​ ಬಳಸಿ ಸಮೋಸಾದ ಪ್ರಯಾಣವನ್ನ ಟ್ರ್ಯಾಕ್​ ಮಾಡಲಾಗಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...