ಮಣಿಪುರದ ಮಾಜಿ ವೇಟ್ ಲಿಫ್ಟರ್ ಲೈಥಂಗ್ಬಮ್ ವಿದ್ಯಾ ಸಾಗರ್ ಸಿಂಗ್ 1 ನಿಮಿಷದಲ್ಲಿ 85 ಪುಶಪ್ಗಳನ್ನ ಕೇವಲ ನಾಲ್ಕೇ ಬೆರಳನ್ನ ಬಳಸಿ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನ ನಿರ್ಮಿಸಿದ್ದಾರೆ.
ಪ್ರತಿ ಕೈನ ಎರಡು ಬೆರಳುಗಳನ್ನ ಮಾತ್ರ ಬಳಸಿ ಸಿಂಗ್ ಈ ಸಾಹಸವನ್ನ ಮಾಡಿದ್ದಾರೆ. ಈ ಗಿನ್ನೆಸ್ ದಾಖಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಸಿಂಗ್, ನಾನು 6ನೇ ತರಗತಿಯಲ್ಲಿ ಇದ್ದಾಗಿನಿಂದಲೇ ಈ ರೀತಿ ಪುಶಪ್ ಮಾಡೋದನ್ನ ಅಭ್ಯಾಸ ಮಾಡ್ತಾ ಇದ್ದೆ. ಹೀಗಾಗಿ ನನಗೆ ಈ ಸಾಧನೆ ಮಾಡೋಕೆ ಸಾಧ್ಯವಾಯ್ತು ಅಂತಾ ಹೇಳಿದ್ದಾರೆ.