ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಟ್ವಿಟರ್ ಖಾತೆಯನ್ನ ಶಾಶ್ವತವಾಗಿ ರದ್ದು ಮಾಡಿರುವ ಟ್ವಿಟರ್ ಕ್ರಮ ಸದ್ಯ ವಿಶ್ವ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಚಾರ. ಟ್ವಿಟರ್ ಸಂಸ್ಥೆಯ ಈ ಕ್ರಮದ ವಿರುದ್ಧ ಟ್ರಂಪ್ ಸ್ನೇಹಿತರು, ಕುಟುಂಬಸ್ಥರು ಹಾಗೂ ಬೆಂಬಲಿಗರು ಕೆಂಡಾಮಂಡಲರಾಗಿದ್ದು ಇದು ವಾಕ್ ಸ್ವಾತಂತ್ರ್ಯದ ಹರಣ ಎಂದು ಕಿಡಿಕಾರುತ್ತಿದ್ದಾರೆ.
ವಾಕ್ ಸ್ವಾತಂತ್ರ್ಯ ಸತ್ತು ಹೋಗಿದೆ ಹಾಗೂ ಇದು ಎಡಪಂಥೀಯರ ನಿಯಂತ್ರಣದಲ್ಲಿದೆ ಅಂತಾ ಡೊನಾಲ್ಡ್ ಟ್ರಂಪ್ ಹಿರಿಯ ಪುತ್ರ ಡೊನಾಲ್ಡ್ ಟ್ರಂಪ್ ಜ್ಯೂನಿಯರ್ ತಮ್ಮ ಟ್ವಿಟರ್ ಪೋಸ್ಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಇತ್ತ ಅಮೆರಿಕ ಅಧ್ಯಕ್ಷರ ವೈಯಕ್ತಿಕ ವಕೀಲ ರುಡಿ ಗ್ವಿಲಿಯಾನಿ, ಇನ್ನು ಯಾರ ಮಾತನ್ನ ಹತ್ತಿಕ್ಕಲಾಗುತ್ತೆ..? ಎಂದು ಪ್ರಶ್ನೆ ಮಾಡಿದ್ದಾರೆ.
ಅಮೆರಿಕ ರಾಜ್ಯ ಕಾಯದರ್ಶಿಯಾಗಿರುವ ಮೈಕ್ ಪಾಂಪಿಯೋ ತಮ್ಮ ವೈಯಕ್ತಿಕ ಟ್ವಿಟರ್ ಖಾತೆಯಲ್ಲಿ, ಬೇಸರದ ವಿಚಾರ ಅಂದ್ರೆ, ಇದು ಎಡಪಂಥೀಯರ ಹೊಸ ತಂತ್ರವೇನಲ್ಲ. ಕಳೆದ ಅನೇಕ ವರ್ಷಗಳಿಂದ ತಮ್ಮ ವಿರುದ್ಧ ಮಾತನಾಡುವವರ ಧ್ವನಿಯನ್ನ ಎಡಪಂಥೀಯರು ಹತ್ತಿಕುತ್ತಲೇ ಬಂದಿದ್ದಾರೆ ಅಂತಾ ಟ್ವೀಟಾಯಿಸಿದ್ದಾರೆ.
ಇನ್ನು ಇವೆಲ್ಲದರ ನಡುವೆ ಟ್ವಿಟರ್ನಿಂದ ಶಾಶ್ವತ ನಿಷೇಧಕ್ಕೊಳಗಾಗಿರುವ ಡೊನಾಲ್ಡ್ ಟ್ರಂಪ್ ತಮ್ಮದೇ ಆದ ಸಾಮಾಜಿಕ ಜಾಲತಾಣ ವೇದಿಕೆಯನ್ನ ನಿರ್ಮಾಣ ಮಾಡಲಾಗಿದ್ದಾರೆ ಅಂತಾ ಹೇಳಲಾಗ್ತಿದೆ.
ಶುಕ್ರವಾರ ತಮ್ಮ ಟ್ವಿಟರ್ ಖಾತೆ ಡಿಲೀಟ್ ಆಗೋದಕ್ಕೂ ಮುನ್ನ ಸ್ವತಃ ಟ್ರಂಪ್ ಈ ವಿಚಾರವಾಗಿ ಪೋಸ್ಟ್ ಒಂದನ್ನ ಮಾಡಿ ಕೂಡಲೇ ಡಿಲೀಟ್ ಕೂಡ ಮಾಡಿದ್ದರು. ಈ ಮಾತಿಗೆ ಪುಷ್ಟಿ ಎಂಬಂತೆ ಬಲಪಂಥೀಯರೇ ಹೆಚ್ಚಾಗಿ ಬಳಕೆ ಮಾಡುವ ಪಾರ್ಲರ್ ಇಲ್ಲವೇ ಗ್ಯಾಬ್ನಲ್ಲಿ ಬಳಕೆದಾರರ ಸಂಖ್ಯೆ ಶನಿವಾರದಿಂದ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣ್ತಿದೆ. ಗ್ಯಾಬ್ ಅಪ್ಲಿಕೇಶನ್ 12 ಗಂಟೆಗಳಲ್ಲಿ 12 ಮಿಲಿಯನ್ಗೂ ಅಧಿಕ ಬಳಕೆದಾರರನ್ನ ಹೆಚ್ಚಿಸಿಕೊಂಡಿದೆ.
ಗ್ಯಾಬ್ ಹಾಗೂ ಪಾರ್ಲರ್ ಅಪ್ಲಿಕೇಶನ್ಗಳನ್ನ ಆಪಲ್ ಹಾಗೂ ಗೂಗಲ್ ಪ್ಲೇ ಸ್ಟೋರ್ನಿಂದ ತೆಗೆದು ಹಾಕಲಾಗಿದೆ.