ಸಿಂಹವನ್ನೇ ಬೆದರಿಸಿದ ಬೀದಿ ನಾಯಿ…! ವಿಡಿಯೋ ವೈರಲ್ 11-01-2021 2:41PM IST / No Comments / Posted In: Latest News, India ಐಎಫ್ಎಸ್ ಅಧಿಕಾರಿ ಪರ್ವೀಣ್ ಟ್ವಿಟರ್ನಲ್ಲಿ ಪ್ರಾಣಿಗಳ ಒಂದಿಲ್ಲೊಂದು ವೈರಲ್ ವಿಡಿಯೋಗಳನ್ನ ಶೇರ್ ಮಾಡ್ತಾನೆ ಇರ್ತಾರೆ. ಅದೇ ರೀತಿ ಈ ಬಾರಿ ಬೀದಿ ನಾಯಿಯೊಂದು ಹೆಣ್ಣು ಸಿಂಹದೊಂದಿಗೆ ಕಾದಾಡಿದ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಬೀದಿ ನಾಯಿಯೊಂದು ಧೈರ್ಯಶಾಲಿಯಾಗಿ ಹೆಣ್ಣು ಸಿಂಹವನ್ನ ಎದುರಿಸಿದ ಪರಿಯನ್ನ ನೀವು ಕಾಣಬಹುದಾಗಿದೆ. ಕೆಲವು ಸೆಕೆಂಡ್ಗಳ ನಾಯಿ ಹಾಗೂ ಸಿಂಹಿಣಿ ತಮ್ಮ ಪಂಜುಗಳ ಮೂಲಕ ಪರಸ್ಪರ ಕಾದಾಡಿಕೊಂಡಿದ್ದಾರೆ. ಕೂಡಲೇ ನಾಯಿ ಅಲ್ಲಿಂದ ಸ್ವಲ್ಪ ದೂರದವರೆಗೆ ನಡೆದು ಬಂದಿದೆ. ಬಳಿಕ ಈ ಬೀದಿ ನಾಯಿ ಮತ್ತೆ ಸಿಂಹಿಣಿಗೇ ಬೆದರಿಸುವ ಮೂಲಕ ಅಲ್ಲಿಂದ ಜಾಗ ಖಾಲಿ ಮಾಡಿದೆ. ಈ ಘಟನೆಯನ್ನ ಇನ್ನೊಂದು ಸಿಂಹಿಣಿ ದೂರದಿಂದಲೇ ಗಮನಿಸುತ್ತಿದೆ. ಬಳಿಕ ಎರಡೂ ಸಿಂಹಗಳು ಒಟ್ಟಾಗಿ ಕಾಡಿನೊಳಕ್ಕೆ ಕಣ್ಮರೆಯಾಗಿವೆ. ಈ ಸಂಪೂರ್ಣ ದೃಶ್ಯಾವಳಿಯನ್ನ ವನ್ಯಜೀವಿ ಛಾಯಾಗ್ರಾಹಕ ಹಾಗೂ ಅಹಮದಾಬಾದ್ನ ಬಿಜೆಪಿ ಕಾರ್ಯದರ್ಶಿ ಜುಬಿನ್ ಅಶಾರಾ ಸೆರೆ ಹಿಡಿದಿದ್ದಾರೆ. ವಿಡಿಯೋದಲ್ಲಿ ನೀವು ಸಫಾರಿ ಜೀಪನ್ನೂ ಕಾಣಬಹುದಾಗಿದೆ. Need this much confidence in life. Dog vs Lion. It also highlights issue of stray dogs & wildlife interaction. @zubinashara pic.twitter.com/lNu7X4ALm5 — Parveen Kaswan, IFS (@ParveenKaswan) January 10, 2021