ಬಳಕೆ ಮಾಡಲು ಯೋಗ್ಯವಲ್ಲದ ಟೈರ್ ಗಳಿಂದ ನಿರ್ಮಾಣವಾಗಿದೆ ಅಪರೂಪದ ಕಲಾಕೃತಿ 10-01-2021 10:12AM IST / No Comments / Posted In: Featured News, International ಬಳಕೆ ಮಾಡಲು ಯೋಗ್ಯವಲ್ಲದ ಪ್ಲಾಸ್ಟಿಕ್ ಹಾಗೂ ರಬ್ಬರ್ ತ್ಯಾಜ್ಯವನ್ನ ವಿಲೇವಾರಿ ಮಾಡೋದು ಬಹು ದೊಡ್ಡ ಸವಾಲಾಗಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ಪರಿಸರದ ಬಗ್ಗೆ ಹೆಚ್ಚು ಕಾಳಜಿ ತೋರುತ್ತಿರೋದ್ರಿಂದ ಇಂತಹ ತ್ಯಾಜ್ಯಗಳನ್ನ ವಿಲೇವಾರಿ ಮಾಡೋಕೆ ಚತುರ ಮಾರ್ಗಗಳನ್ನ ಹುಡುಕುತ್ತಿದ್ದಾರೆ. ಅದೇ ರೀತಿ ಚೀನಾದ ಪುರುಷರ ಗುಂಪೊಂದು ರಬ್ಬರ್ ಟ್ಯೂಬ್ಗಳನ್ನ ಬಳಸಿ ಪೌರಾಣಿಕ ಶಿಲ್ಪವನ್ನ ತಯಾರು ಮಾಡಿದ್ದಾರೆ. ಸಿಚುವಾನ್ ಪ್ರಾಂತ್ಯದಲ್ಲಿ ಬಳಕೆ ಮಾಡದೇ ಬಿಸಾಡಲಾದ ಟೈರ್ಗಳಿಗೆ ಈ ಪುರುಷರ ಗುಂಪು ಎರಡನೇ ಜೀವ ನೀಡಿದೆ. ಮೂವರ ಗುಂಪು ಸೇರಿ ಕಸದ ಬುಟ್ಟಿ ಸೇರಬೇಕಾದ ಟೈರ್ಗಳನ್ನ ಬಳಸಿ ದೈತ್ಯ ಗೋಲ್ಡನ್ ಡ್ರ್ಯಾಗನ್ ಶಿಲ್ಪವನ್ನ ನಿರ್ಮಿಸಿದ್ದಾರೆ. 1000 ಕ್ಕೂ ಹೆಚ್ಚು ಟೈರ್ಗಳನ್ನ ಬಳಸಿ 8 ಮೀಟರ್ ಉದ್ದದ ಮೂರ್ತಿಯನ್ನ ನಿರ್ಮಾಣ ಮಾಡೋಕೆ ಮೂವರ ಗುಂಪು 20 ದಿನಗಳ ಸಮಯವನ್ನ ತೆಗೆದುಕೊಂಡಿದೆ. Meet the three men from Sichuan who turn abandoned tyres into majestic animals. pic.twitter.com/VleXgk9wP1 — South China Morning Post (@SCMPNews) January 6, 2021