ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಸ್ಥಾನ ವಿಶ್ವದ ಶ್ರೀಮಂತ ಬಿಲಿಯನೇರ್ಗಳ ಪಟ್ಟಿಯಲ್ಲಿ ಮತ್ತಷ್ಟು ಕೆಳಕ್ಕೆ ಕುಸಿದಿದೆ. ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ ಮುಕೇಶ್ ಪ್ರಸ್ತುತ ವಿಶ್ವದ 13ನೇ ಶ್ರೀಮಂತ ಎನಿಸಿಕೊಂಡಿದ್ದಾರೆ.
ಬ್ಲೂಮ್ ಬರ್ಗ್ ಸೂಚ್ಯಂಕದ ಪ್ರಕಾರ ಅಂಬಾನಿಯ ಪ್ರಸ್ತುತ ಆಸ್ತಿ ಮೌಲ್ಯ 5.36 ಲಕ್ಷ ಕೋಟಿ ರೂಪಾಯಿ ಆಗಿದೆ.
ಬ್ಲೂಮ್ಬರ್ಗ್ ಶ್ರೇಯಾಂಕದ ಪ್ರಕಾರ ಆಗಸ್ಟ್ 2020ರಲ್ಲಿ ಅಂಬಾನಿ ನಾಲ್ಕನೇ ಸ್ಥಾನಕ್ಕೆ ಏರಿದ್ದರು. ಆದರೆ ಇತ್ತೀಚಿನ ಆರ್ಐಎಲ್ ಷೇರುಗಳಲ್ಲಿನ ತಿದ್ದುಪಡಿಯಿಂದಾಗಿ ಅಂಬಾನಿ ನಿವ್ವಳ ಆಸ್ತಿ ಮೌಲ್ಯ ಕುಸಿತ ಕಂಡಿದೆ. ಕಳೆದ ಮೂರು ತಿಂಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಸಾರ್ವಕಾಲಿಕ ಆಸ್ತಿಯಲ್ಲಿ 18.3 ಪ್ರತಿಶತದಷ್ಟು ಇಳಿಕೆ ಕಂಡಿದೆ.
ಆರ್ಐಎಲ್ ಷೇರು ಕಳೆದ ವರ್ಷ ಮಾರ್ಚ್ನಲ್ಲಿ 128.7 ಪ್ರತಿಶತದಷ್ಟು ಏರಿಕೆ ಕಂಡಿದ್ದು 32.2 ಪ್ರತಿಶತದಷ್ಟು ಲಾಭ ಕಂಡಿದೆ. ಆದರೆ ಅಮೆರಿಕ ಇ ಕಾಮರ್ಸ್ ದೈತ್ಯ ಅಮೆಕಾನ್ ಫ್ಯೂಚರ್ ಗ್ರೂಪ್ನೊಂದಿಗೆ ಹೂಡಿಕೆ ಮಾಡಿದ ಬಳಿಕ ಆರ್ಐಎಲ್ ಷೇರು ಇಳಿಮುಖವಾಗಿದೆ.