ಇಂಡಿಯಾ v/s ಆಸ್ಟ್ರೇಲಿಯಾ: ಅದ್ಭುತ ಫೀಲ್ಡಿಂಗ್ ಪ್ರದರ್ಶಿಸಿದ ಜೋಶ್ ಹ್ಯಾಜಲ್ವುಡ್ 09-01-2021 3:01PM IST / No Comments / Posted In: Latest News, Sports ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ನ ಮೂರನೇ ದಿನದ ಪಂದ್ಯದಂದು ಆಸ್ಟ್ರೇಲಿಯಾ ಆಟಗಾರ ಜೋಶ್ ಹ್ಯಾಜಲ್ವುಡ್ ಅದ್ಭುತ ಫೀಲ್ಡಿಂಗ್ ಮೂಲಕ ಟೀಂ ಇಂಡಿಯಾಗೆ ಒಂದು ವಿಕೆಟ್ ನಷ್ಟವಾಗಲು ಕಾರಣರಾದ್ರು. ಅಜಿಂಕ್ಯ ರಹಾನೆ ಪೆವಿಲಿಯನ್ಗೆ ಮರಳಿದ ಬಳಿಕ ಹನುಮ ವಿಹಾರಿ ಮೈದಾನಕ್ಕೆ ಇಳಿದ್ರು. ಬಹಳ ಎಚ್ಚರಿಕೆಯಿಂದ ಆಸ್ಟ್ರೇಲಿಯನ್ ಬೌಲರ್ಗಳ ಎಸೆತಗಳನ್ನ ಎದುರಿಸುತ್ತಿದ್ದ ವಿಹಾರಿ, ನಾಥನ್ ಲಿಯಾನ್ ಎಸೆದ ಬೌಲ್ನ್ನು ಮಿಡ್ ಆಫ್ ಕಡೆಗೆ ಕಳಿಸುವಲ್ಲಿ ಯಶಸ್ವಿಯಾಗಿದ್ರು. ಬೇಗನೇ ಒಂದು ರನ್ ಗಳಿಸಬೇಕು ಅಂತಾ ಕ್ರೀಸ್ನಿಂದ ಹೊರಗೆ ಕಾಲಿಟ್ಟ ವೇಳೆ ಹ್ಯಾಜಲ್ವುಡ್ ನಮ್ಮ ಬಲ ಭಾಗದ ಕಡೆ ಜಿಗಿದು ಗಾಳಿಯಲ್ಲೇ ಬಾಲನ್ನ ಕ್ಯಾಚ್ ಮಾಡಿ ನೇರವಾಗಿ ಸ್ಟಂಪಿನಡೆಗೆ ಎಸೆಯುವ ಮೂಲಕ ವಿಹಾರಿಯನ್ನ ರನೌಟ್ ಮಾಡುವಲ್ಲಿ ಯಶಸ್ವಿಯಾದ್ರು. ಈ ಅದ್ಭುತ ಫೀಲ್ಡಿಂಗ್ನ ಕ್ಲಿಪ್ನ್ನ ಕ್ರಿಕೆಟ್ ಡಾಟ್ ಕಾಮ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದೆ. Don't take on the Hoff! ⚡@hcltech | #AUSvIND pic.twitter.com/eXFpRPuKiJ — cricket.com.au (@cricketcomau) January 9, 2021