ಸರಕು ರೈಲನ್ನೂ ಚಲಾಯಿಸಿ ಸೈ ಎನಿಸಿಕೊಂಡ ಮೊದಲ ಭಾರತೀಯ ಮಹಿಳೆ..! 09-01-2021 7:20AM IST / No Comments / Posted In: Latest News, India 2021ರ ಹೊಸ ವರ್ಷದಿಂದ ಭಾರತೀಯ ಮಹಿಳೆಯರು ತಾವು ಈವರೆಗೆ ಕಾಲಿಡದ ಕ್ಷೇತ್ರಗಳಲ್ಲೂ ಛಾಪನ್ನ ಮೂಡಿಸೋಕೆ ಪಣ ತೊಟ್ಟಂತೆ ಕಾಣುತ್ತಿದೆ. ಟ್ಯಾಕ್ಸಿ ಓಡಿಸೋದ್ರಿಂದ ಹಿಡಿದು ಬಾಹ್ಯಾಕಾಶದವರೆಗೂ ಕಾಲಿಟ್ಟಿರೋ ಮಹಿಳೆಯರು ಇದೀಗ ಟ್ರೇನ್ನ ಸಾರಥಿ ಕೂಡ ಆಗಿದ್ದಾರೆ. ಜನವರಿ 5ನೇ ತಾರೀಖಿನಂದು ಮಹಾರಾಷ್ಟ್ರದಿಂದ ಗುಜರಾತ್ಗೆ ಸಂಚರಿಸಿದ ಸರಕು ರೈಲು ಮೊಟ್ಟ ಮೊದಲ ಮಹಿಳಾ ಡ್ರೈವರ್ನ್ನು ಕಂಡಿದೆ. ಮೂವರು ಮಹಿಳೆಯರಾದ ಆಕಾಂಕ್ಷಾ ರಾಯ್, ಉದಿತಾ ವರ್ಮಾ ಹಾಗೂ ಕುಂಕುಮ್ ಸೂರಜ್ ಡೊಂಗ್ರೆ ಪಶ್ಚಿಮ ರೈಲ್ವೆಯ ಮುಂಬೈ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ. ಗೂಡ್ಸ್ ಗಾರ್ಡ್ ಆಗಿದ್ದ ಆಕಾಂಕ್ಷಾ ರಾಯ್ ಈ ರೈಲನ್ನ ಚಲಾವಣೆ ಮಾಡಿದ್ರೆ ಡೊಂಗ್ರೆ ಲೊಕೋ ಪೈಲಟ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಉದಿತಾ ವರ್ಮಾ ಸೀನಿಯರ್ ಅಸಿಸ್ಟೆಂಟ್ ಲೋಕೋ ಪೈಲಟ್ ಆಗಿ ಕೆಲಸ ಮಾಡಿದ್ದಾರೆ ಅಂತಾ ಮುಂಬೈ ಮಿರರ್ ಪತ್ರಿಕೆ ವರದಿ ಮಾಡಿದೆ. ಈ ಮೂಲಕ ಆಕಾಂಕ್ಷಾ ರಾಯ್ ಭಾರತದಲ್ಲಿ ಸರಕು ರೈಲನ್ನ ಚಲಾವಣೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Western Railway breaks yet another stereotype! An all-female crew piloted a Goods train from Vasai Road to Vadodara on 5th January, 2021 which has set a glaring example that no job is beyond the capacity of women to perform as well as to excel. @drmbct pic.twitter.com/EdLpMYJU3y — Western Railway (@WesternRly) January 6, 2021