ಹಬ್ಬಗಳ ಸೀಸನ್ ಶುರುವಾಯ್ತು ಅಂದ್ರೆ ಸಾಕು ಆನ್ಲೈನ್ ಶಾಪಿಂಗ್ ಮಾರುಕಟ್ಟೆಗಳು ಗ್ರಾಹಕರನ್ನ ಸೆಳೆಯೋಕೆ ಆಫರ್ಗಳ ಸುರಿಮಳೆಯನ್ನೇ ಹರಿಸುತ್ತವೆ. ಆದರೆ ಕೊಲ್ಕತ್ತಾದ ವ್ಯಕ್ತಿಯೊಬ್ಬರಿಗೆ ಈ ಹಬ್ಬದ ಆಫರ್ ದೊಡ್ಡ ಶಾಕ್ ಅನ್ನೇ ನೀಡಿದೆ.
ಏರ್ ಫೋರ್ಸ್ ವಿಂಗ್ ಕಮಾಂಡರ್ ಆನ್ಲೈನ್ ಶಾಪಿಂಗ್ ಮೂಲಕ ಐಫೋನ್ ಆರ್ಡರ್ ಮಾಡಿದ್ರೆ ಅವರಿಗೆ ಸೋಪನ್ನ ಕಳಿಸುವ ಮೂಲಕ ಮಕ್ಮಲ್ ಟೋಪಿ ಹಾಕಿದ್ದಾರೆ.
38 ವರ್ಷದ ವಿಂಗ್ ಕಮಾಂಡರ್ ಕೆಲ ದಿನಗಳ ಹಿಂದಷ್ಟೇ ಆನ್ಲೈನ್ ಮಾರುಕಟ್ಟೆಯಲ್ಲಿ ಐ ಫೋನ್ ಒಂದನ್ನ ಬುಕ್ ಮಾಡಿದ್ದರು. ಡೆಲಿವರಿ ಸ್ವೀಕರಿಸುತ್ತಿದ್ದಂತೆಯೇ ಬಾಕ್ಸ್ ಓಪನ್ ಮಾಡಿದ ಅವರಿಗೆ ಭರ್ಜರಿ ಶಾಕ್ ಒಂದು ಕಾದಿತ್ತು.
ಅದೇನಂದರೆ ಐ ಫೋನ್ ಇರುವ ಜಾಗದಲ್ಲಿ ಸೋಪನ್ನ ಇಡಲಾಗಿತ್ತು. ಈ ವಂಚನೆಯಿಂದ ಆಘಾತಕ್ಕೊಳಗಾದ ಅವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜನವರಿ 2ರಂದು ನಾನು 84,900 ರೂಪಾಯಿ ಹಣ ಖರ್ಚು ಮಾಡಿ ಐಫೋನ್ 12 ಬುಕ್ ಮಾಡಿದ್ದೇನೆ. ಕ್ರೆಡಿಟ್ ಕಾರ್ಡ್ನಲ್ಲಿ ನಾನು ಈ ಪೇಮೆಂಟ್ ಮಾಡಿದ್ದು ಆನ್ಲೈನ್ ಮಾರುಕಟ್ಟೆಯವರು ಮೊಬೈಲ್ ಫೋನ್ ಬದಲಾಗಿ ಸೋಪನ್ನ ಕಳುಹಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.