
ಸ್ಯಾಂಟಿಸಿಮಾ ಅನುಂಜಿಯಾಟಾ ಆಸ್ಪತ್ರೆಯ ಮಕ್ಕಳ ವಾರ್ಡ್ನಲ್ಲಿ ಬುಧವಾರ ಈ ಘಟನೆ ನಡೆದಿದೆ. ವಾರ್ಡ್ನಲ್ಲಿರುವ ಮಕ್ಕಳಿಗೆ ಉಡುಗೊರೆ ನೀಡುವ ಸಲುವಾಗಿ ಮಾಟಗಾತಿ ವೇಷದಲ್ಲಿರುವ ಮಹಿಳೆ ಈ ಸಾಹಸವನ್ನ ಪ್ರದರ್ಶಿಸಿದ್ದಾರೆ.
ಸಾಮಾನ್ಯವಾಗಿ ಮಾಟಗಾತಿ ಅಂದರೆ ಖಳನಾಯಕಿ ಎಂಬ ಅಭಿಪ್ರಾಯ ಮೂಡಿಬಿಡುತ್ತೆ. ಆದರೆ ಈ ಮಹಿಳೆ ಮಾತ್ರ ಮಾಟಗಾತಿ ವೇಷದಲ್ಲಿ ಮಕ್ಕಳನ್ನ ಹೆದರಿಸದೇ ಮೆರುಗನ್ನ ನೀಡಿದ್ದಾರೆ.
ಅಂದಹಾಗೆ ಮಹಿಳೆ ಮಾಟಗಾತಿಯ ವೇಷವನ್ನೇ ಧರಿಸೋದ್ರ ಹಿಂದೆ ಬಲವಾದ ಕಾರಣವೂ ಇದೆ. ಇಲ್ಲಿನ ಜಾನಪದ ಕತೆಯೊಂದರ ಪ್ರಕಾರ ಬೆಫಾನಾ ಎಂಬ ಮಾಟಗಾತಿ ಜನವರಿ 5ರ ಮುನ್ನಾದಿನಂದು ಉಡುಗೊರೆಗಳನ್ನ ನೀಡುತ್ತಾಳೆ ಎಂದು ಹೇಳಲಾಗುತ್ತೆ. ಕ್ರಿಸ್ಮಸ್ನ ಸಾಂತಾಕ್ಲಾಸ್ ರೀತಿಯಲ್ಲೇ ಎಪಿಫ್ಯಾನಿ ಡೇ ಆಚರಿಸಲಾಗುತ್ತೆ.