ವಿದೇಶಗಳನ್ನೂ ಮೀರಿಸುವಂತಿದೆ ಕೇರಳದ ಈ ಪಾರ್ಕ್..! 08-01-2021 7:25AM IST / No Comments / Posted In: Latest News, India, Tourism ಕೇರಳದಲ್ಲಿ ತೀರಾ ಇತ್ತೀಚೆಗೆ ನಿರ್ಮಾಣ ಮಾಡಲಾದ ಪಾರ್ಕ್ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿವೆ. ಪಾರ್ಕ್ನ್ನ ಸೌಂದರ್ಯವನ್ನ ಕಂಡ ನೆಟ್ಟಿಗರು ಇದನ್ನ ಯುರೋಪ್ ಸಿಟಿಗೆ ಹೋಲಿಕೆ ಮಾಡ್ತಿದ್ದಾರೆ. ಕೊಝಿಕೊಡೆ ಜಿಲ್ಲೆಯ ಕರಕ್ಕಡ್ನಲ್ಲಿರುವ ವಗ್ಭಾತಾನಂದ ಪಾರ್ಕ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡ್ತಿದೆ. ಕೇರಳದ ಪ್ರವಾಸೋದ್ಯಮ ಇಲಾಖೆ ಸಚಿವ ಕೊಡಕಂಪಲ್ಲಿ ಸುರೇಂದ್ರನ್ ಈ ಪಾರ್ಕ್ನ್ನ ಲೋಕಾರ್ಪಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಪಾರ್ಕ್ನ ರಸ್ತೆ, ಮುಖ್ಯ ದ್ವಾರ ಸೇರಿದಂತೆ ವಿವಿಧ ಫೋಟೊಗಳು ವೈರಲ್ ಆಗಿವೆ. ಈ ಪಾರ್ಕ್ನಲ್ಲಿ ವಿವಿಧ ಪ್ರತಿಮೆಗಳು, ಬ್ಯಾಡ್ಮಿಂಟನ್ ಕೋರ್ಟ್, ಮಕ್ಕಳ ಪಾರ್ಕ್ , ಸಾರ್ವಜನಿಕ ಶೌಚಾಲಯ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನ ಒದಗಿಸಲಾಗಿದೆ. ವ್ಹೀಲ್ಚೇರ್ನಲ್ಲಿ ಓಡಾಡುವವರಿಗೂ ನೆರವಾಗುವ ರೀತಿಯಲ್ಲಿ ಪಾರ್ಕ್ಗೆ ಟೈಲ್ಸ್ನ್ನು ಅಳವಡಿಸಲಾಗಿದೆ.