ಪಸಿದ್ಧ ದ್ವಿಚಕ್ರ ವಾಹನ ಕಂಪನಿಯಾದ ಕವಾಸಕಿ ಎರಡು ಹೊಚ್ಚ ಹೊಸ ಸೂಪರ್ ಚಾರ್ಜಡ್ ಬೈಕ್ ಮಾಡೆಲ್ನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಕವಾಸಕಿ ಜೆಡ್ ಹೆಚ್ 2, ಕವಾಸಕಿ ಜೆಡ್ ಹೆಚ್ 2 ಎಸ್ಇ ಎಂಬ ಎರಡು ಬೈಕ್ಗಳು ಇದಾಗಿವೆ. ಇವುಗಳ ಬೆಲೆ ತಲಾ 21.9 ಲಕ್ಷ ರೂಪಾಯಿ ಹಾಗೂ 25.9 ಲಕ್ಷ ರೂಪಾಯಿ ಎಂದು ಕಂಪನಿ ಹೇಳಿದೆ.
ಕವಾಸಕಿ ಜೆಡ್ ಹೆಚ್ 2 ಬೈಕ್ ನಾಲ್ಕು ರೈಡ್ ಮೋಡ್ಗಳನ್ನ ಹೊಂದಿದೆ. ರಸ್ತೆ, ಮಳೆ, ಸ್ಪೋರ್ಟ್ಸ್ ಹಾಗೂ ರೈಡರ್ಗಳೆಂಬ ನಾಲ್ಕು ಮೋಡ್ಗಳಿವೆ. ಇದು ಮಾತ್ರವಲ್ಲದೇ ಮೂರು ಪವರ್ ಮೋಡ್ಗಳಿವೆ. ಇನ್ನೂ ಹೆಚ್ಚುವರಿಯಾಗಿ ಕವಾಸಕಿ ಲಾಂಚ್ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್ ಹಾಗೂ ಕ್ರೂಸ್ ಕಂಟ್ರೋಲರ್ನಂತಹ ಎಲೆಕ್ಟ್ರಾನಿಕ್ ರೈಡರ್ ಸಾಧನಗಳಿವೆ.
ಕವಾಸಕಿ ಜೆಡ್ ಹೆಚ್2 ಎಸ್ಇ 43 ಎಂಎಂ ಇನ್ವರ್ಟೆಡ್ ಫೋರ್ಕ್ನ್ನು ನಿರ್ವಹಿಸುತ್ತದೆ. ಇದನ್ನ ಕವಾಸಕಿಯ ಸೆಮಿ ಎಲೆಕ್ಟ್ರಾನಿಕ್ ವ್ಯವಸ್ಥೆ ಮೂಲಕ ವಿದ್ಯುನ್ಮಾನವಾಗಿ ನಿಯಂತ್ರಿಸಲಾಗುತ್ತೆ. ಸ್ಕೈ ಹೂಕ್ ವ್ಯವಸ್ಥೆ ವಿದ್ಯುನ್ಮಾನ ನಿಯಂತ್ರಿತ ಸಂಕೋಚನ ಹಾಗೂ ರಿಬೌಂಡ್ ಹೊಂದಾಣಿಕೆಯನ್ನ ನಿಯಂತ್ರಿಸುತ್ತೆ.