ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯೂನಿಕೇಷನ್, ರಿಲಯನ್ಸ್ ಟೆಲಿಕಾಂ ಹಾಗೂ ರಿಲಯನ್ಸ್ ಇನ್ಫ್ರಾಟೆಲ್ನ ಬ್ಯಾಂಕ್ ಖಾತೆಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ.
ರಿಲಯನ್ಸ್ ಕಮ್ಯೂನಿಕೇಷನ್ನ ಮಾಜಿ ನಿರ್ದೇಶಕ ಪುನೀತ್ ಗರ್ಗ್ ಆರ್ಬಿಐ ಸುತ್ತೋಲೆ ಗ್ರಾಹಕರಿಗೆ ಮಾಡುತ್ತಿರುವ ವಂಚನೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ರಿಲಯನ್ಸ್ ಕಮ್ಯೂನಿಕೇಷನ್ ಪರ ಹಾಜರಾದ ಹಿರಿಯ ವಕೀಲ ಜೆ.ಜೆ. ಭಟ್, ಈ ಸುತ್ತೋಲೆ ನೈಸರ್ಗಿಕ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ ಎಂದು ವಾದಿಸಿದ್ದರು. ವಂಚನೆಯ ಖಾತೆಗಳು ಎಂದು ಬ್ಯಾಂಕ್ಗಳು ಘೋಷಿಸಿರುವ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ 2016ರ ಸುತ್ತೋಲೆಯನ್ನು ಪ್ರಶ್ನಿಸಿ ರಿಲಯನ್ಸ್ನ ಮೂರು ಕಂಪನಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು.