ಮಂಗಳ ಗ್ರಹದ ಸುತ್ತ ಗಿರಕಿ ಹೊಡೆಯುತ್ತಿರುವ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಆರ್ಬೈಟರ್ ಒಂದು ಅಂಗಾರನ ಅಂಗಳದಿಂದ ಸೆರೆ ಹಿಡಿದ ಎಚ್‌ಡಿ ಚಿತ್ರಗುಚ್ಛವೊಂದನ್ನು ಭೂಮಿಗೆ ರವಾನೆ ಮಾಡಿದೆ.
ಮಂಗಳನ ಮೇಲಿರುವ ವಾಲ್ಲೆಸ್ ಮ್ಯಾರಿನೆರೀಸ್ ಪ್ರದೇಶದ ಬಳಿ ಇರುವ ಗುಡ್ಡಗಾಡು ಪ್ರದೇಶವೊಂದರ ಚಿತ್ರವನ್ನು ಈ ಚಿತ್ರದಲ್ಲಿ ನೋಡಬಹುದಾಗಿದೆ.
ಇಲ್ಲಿ ಬಹಳಷ್ಟು ಕುಳಿಗಳು ಇದ್ದು, ಅಂತರಿಕ್ಷದಿಂದ ನಿರಂತರವಾಗಿ ಇಲ್ಲಿಗೆ ಬಂದು ಬಡಿಯುತ್ತಿರುವ ಉಲ್ಕೆಗಳು ಹಾಗೂ ಕ್ಷುದ್ರಗ್ರಹಗಳಿಂದ ಹೀಗೆಲ್ಲಾ ಆಗಿದೆ ಎಂದು ಅಂದಾಜಿಸಲಾಗಿದೆ.
ಹೈ-ರೆಸಲ್ಯೂಷನ್ ಸ್ಟೀರಿಯೋ ಕ್ಯಾಮೆರಾವನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಈ ಆರ್ಬೈಟರ್ 2004ರಲ್ಲಿ ಭೂಮೇಲ್ಮೈನಿಂದ ಉಡಾವಣೆಯಾಗಿದ್ದು, ಮಂಗಳನ ಸುತ್ತ ಗಿರಕಿ ಹೊಡೆಯುತ್ತಿದೆ.