ಇರಾನ್ನ ನಿರಂತರ ಬೆದರಿಕೆಗಳ ನಡುವೆಯೂ ಅಮೆರಿಕದ ವಿಮಾನ ವಾಹಕ ನೌಕೆ ಯುಎಸ್ಎಸ್ ನಿಮಿಟ್ಜ್ ಗಲ್ಫ್ನಲ್ಲೇ ಉಳಿಯಲಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.
ಅಮೆರಿಕ ವಿಮಾನ ವಾಹಕ ನೌಕೆಯನ್ನ ಮಧ್ಯಪ್ರಾಚ್ಯದಿಂದ ಹೊರಹಾಕಲು ಆದೇಶಿಸಿದ ಕೆಲ ದಿನಗಳ ನಂತರ ದೇಶದ ರಕ್ಷಣಾ ಕಾರ್ಯದರ್ಶಿ ಕ್ರಿಸ್ಟೋಫರ್ ಮಿಲ್ಲರ್ ಆ ನಿರ್ಧಾರವನ್ನ ಹಿಂಪಡೆದಿದ್ದಾರೆ.
ಈ ವಿಚಾರವಾಗಿ ಭಾನುವಾರ ರಾತ್ರಿ ಮಾತನಾಡಿದ ಮಿಲ್ಲರ್, ಡೊನಾಲ್ಡ್ ಟ್ರಂಪ್ ಹಾಗೂ ಅಮೆರಿಕದ ಅಧಿಕಾರಿಗಳಿಗೆ ಇರಾನ್ನಿಂದ ತೀರಾ ಇತ್ತೀಚಿಗೆ ಬರುತ್ತಿರುವ ಬೆದರಿಕೆಗಳು ಬರುತ್ತಿವೆ. ಆದಾಗ್ಯೂ ಯುಎಸ್ಎಸ್ ನಿಮಿಟ್ಜ್ ಯುಎಸ್ ಸೆಂಟ್ರಲ್ ಕಮಾಂಡ್ ಕಾರ್ಯಾಚರಣೆಯ ನಿಲ್ದಾಣದಲ್ಲಿ ಉಳಿಯಲಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಇರಾನ್ನ ಜನರಲ್ ಕಾಸೆಮ್ ಸೂಲೈಮಾನಿ ಹತ್ಯೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಶ್ಚರ್ಯಕರ ರೀತಿಯಲ್ಲಿ ವಾಷಿಂಗ್ಟನ್ ಹಾಗೂ ಟೆಹ್ರಾನ್ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು.
2020ರ ಕೊನೆಯ ದಿನಗಳಲ್ಲಿ ಅಮೆರಿಕ ಬಿ 25 ಪರಮಾಣು ಸಾಮರ್ಥ್ಯದ ಬಾಂಬರ್ಗಳನ್ನ ಮಧ್ಯಪ್ರಾಚ್ಯಕ್ಕೆ ಹಾರಿಸಿತು. ಇದರಿಂದ ಆಕ್ರೋಶಗೊಂಡ ಇರಾನ್ ಹಿರಿಯ ಮಿಲಿಟರಿ ಸಲಹೆಗಾರ, ಟ್ರಂಪ್ ಹೊಸ ವರ್ಷವನ್ನ ಅಮೆರಿಕದ ಪಾಲಿಗೆ ಶೋಕವನ್ನಾಗಿ ಪರಿವರ್ತನೆ ಮಾಡದಿರಿ ಎಂದು ಟ್ವೀಟಾಯಿಸಿದ್ದರು.