ದೇಶಾದ್ಯಂತ ಇರುವ ಆರು ಕೋಟಿಯಷ್ಟು ಇಪಿಎಫ್ ಚಂದಾದಾರರಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ದೊಡ್ಡ ಧಮಾಕಾ ಘೋಷಿಸಿದೆ.
2019-20 ಸಾಲಿನ ಬಡ್ಡಿಗಾಗಿ ಕಾಯುತ್ತಿದ್ದ ಇಪಿಎಫ್ ಖಾತೆದಾರರಿಗೆ ಇಪಿಎಫ್‌ಒ ಬಡ್ಡಿಯನ್ನು ಜಮಾ ಮಾಡಲು ಆರಂಭಿಸಿದೆ. ಡಿಸೆಂಬರ್ 31ರಿಂದ ಪಿಎಫ್ ಚಂದಾದಾರರ ಖಾತೆಗಳಿಗೆ 8.5%ದಷ್ಟು ಬಡ್ಡಿ ನೀಡಲಾಗುವುದು ಎಂದು ಕಾರ್ಮಿಕ ಸಚಿವ ಸಂತೂಷ್ ಗಂಗ್ವಾರ್ ತಿಳಿಸಿದ್ದಾರೆ. ಇಂದಿನಿಂದಲೇ ಈ ಅನುಕೂಲಗಳು ಸಂಬಂಧಪಟ್ಟ ಮಂದಿಗೆ ದೊರಕಲಿವೆ ಎಂದು ಸಚಿವರು ತಿಳಿಸಿದ್ದಾರೆ.
ಇಪಿಎಫ್‌ಓ ಚಂದಾದಾರರು ತಂತಮ್ಮ ಮನೆಗಳಲ್ಲೇ ಕುಳಿತುಕೊಂಡು ತಮ್ಮ ಖಾತೆಗಳಿಗೆ ಈ ಬಡ್ಡಿ ದುಡ್ಡು ಸಂದಾಯವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬಹುದಾಗಿದೆ. ಎಸ್‌ಎಂಎಸ್, ಆನ್ಲೈನ್ ಹಾಗೂ ಉಮಾಂಗ್ ಕಿರು ತಂತ್ರಾಶಗಳಲ್ಲದೇ ಇಪಿಎಫ್‌ಓ ಸಹಾಯವಾಣಿಗೆ ಮಿಸ್ ಕಾಲ್ ಕೊಡುವ ಮೂಲಕ ಈ ವಿಷಯದ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.