ಬೆಳಿಗ್ಗೆ ಬೆಳಿಗ್ಗೆ ವಾಕಿಂಗ್ಗೆ ಹೋಗುತ್ತಿರುವ ಸಂದರ್ಭದಲ್ಲಿ ನಿಮ್ಮ ಕಣ್ಣಿಗೆ ಶವಪೆಟ್ಟಿಗೆಯೊಂದು ಮಾರ್ಗಮಧ್ಯದಲ್ಲಿ ಕಂಡರೆ ಹೇಗಾಗುತ್ತದೆ? ಶಾಕ್ ಆಗುತ್ತದಲ್ಲವೇ?
ಬಾಕ್ಸಿಂಗ್ ಡೇ ಮುಂಜಾನೆ ವಾಕಿಂಗ್ಗೆ ಹೊರಟಿದ್ದ ವ್ಯಕ್ತಿಯೊಬ್ಬರು ಖಾಲಿ ಶವಪೆಟ್ಟಿಗೆಯೊಂದನ್ನು ಕಂಡು ಶಾಕ್ ಆಗಿದ್ದಾರೆ. ಪ್ರವಾಹದ ನೀರಿನಲ್ಲಿ ತೇಲಿಕೊಂಡು ಬಂದಿದ್ದ ಈ ಶವಪೆಟ್ಟಿಗೆ ಅಲ್ಲಿಗೆ ಬಂದು ಬಿದ್ದಿತ್ತು.
ನಾರ್ಥಾಂಪ್ಟನ್ನ ಅಬಿಂಗ್ಟನ್ ಮೆಡೋಸ್ನಲ್ಲಿ ವಾಕಿಂಗ್ ಮಾಡುತ್ತಿದ್ದ ರಸೆಲ್ ಮೂರ್ ಹಾಗು ಅವರ ಸಹೋದರಿ ಈ ಪೆಟ್ಟಿಗೆಯನ್ನು ಕಂಡಾಗ ಅದರ ಮೇಲೆ ಅರೇಬಿಕ್ ಭಾಷೆಯ ಅಕ್ಷರಗಳು ಕಂಡಿವೆ.
ಸೌದಿ ಅರೇಬಿಯಾದ ಆರೋಗ್ಯ ಇಲಾಖೆಗೆ ಸೇರಿದ ಶವಪೆಟ್ಟಿಗೆ ಇದಾಗಿದೆ ಎಂದು ತಿಳಿದು ಬಂದಿದೆ. ನೆನೆ ನದಿಯ ಪ್ರವಾಹದಲ್ಲಿ ಈ ಪೆಟ್ಟಿಗೆ ಕೊಚ್ಚಿಕೊಂಡು ಬಂದು ಇಲ್ಲಿ ಬಿದ್ದಿದೆ. ಈ ಶವಪೆಟ್ಟಿಗೆ ಬ್ರಿಟನ್ಗೆ ಹೇಗೆ ಬಂದು ಸೇರಿದೆ ಎಂದು ತಿಳಿದು ಬಂದಿಲ್ಲ.