ನವದೆಹಲಿ: ಇನ್ನು ಮೂರು ತಿಂಗಳು ಸಣ್ಣ ಉಳಿತಾಯಗಳ ಬಡ್ಡಿ ದರ ಇಳಿಕೆ ಮಾಡುವುದಿಲ್ಲ ಎಂದು ಕೇಂದ್ರ ಹಣಕಾಸು ಮಂತ್ರಾಲಯ ತಿಳಿಸಿದೆ.
ಕೇಂದ್ರ ಸರ್ಕಾರ ಪಿಪಿಎಫ್, ಎನ್.ಎಸ್.ಸಿ. ಮೊದಲಾದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು 2021 ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಇಳಿಕೆ ಮಾಡದಿರಲು ತೀರ್ಮಾನ ಕೈಗೊಂಡಿದೆ.
ಹಿಂದಿನ ತ್ರೈಮಾಸಿಕದ ರೀತಿಯಲ್ಲಿ ಪಿಪಿಎಫ್ ಗೆ ಶೇಕಡ 7.1 ರಷ್ಟು, ಹಿರಿಯ ನಾಗರಿಕರ 5 ವರ್ಷದ ಉಳಿತಾಯ ಯೋಜನೆಗಳ ಶೇಕಡ 7.4 ರಷ್ಟು, ಕಿಸಾನ್ ವಿಕಾಸ ಪತ್ರಕ್ಕೆ ಶೇಕಡ 6.9 ರಷ್ಟು, ಸುಕನ್ಯಾ ಸಮೃದ್ಧಿ ಯೋಜನೆಗೆ ಶೇಕಡ 7.6 ರಷ್ಟು, ಎನ್.ಎಸ್.ಸಿ.ಗೆ ಶೇಕಡ 6.8 ರಷ್ಟು ಬಡ್ಡಿ ದರ ನೀಡಲಾಗುವುದು.