ಟೆಲಿಕಾಂ ಲೋಕದ ದೈತ್ಯ ಕಂಪನಿಗಳಲ್ಲಿ ಒಂದಾದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಮತ್ತೊಮ್ಮೆ ಬೇರೆ ನೆಟ್ವರ್ಕ್ನ ಕರೆಗಳಿಗೂ ಶುಲ್ಕ ವಿಧಿಸುವುದನ್ನ ನಿಲ್ಲಿಸಲಿದೆ.
ಜನವರಿ 1ರಿಂದ ಈ ಹೊಸ ಕ್ರಮ ಜಾರಿಗೆ ಬರಲಿದೆ. ಟೆಲಿಕಾಂ ರೆಗ್ಯೂಲಾರಿಟಿ ಅಥಾರಿಟಿ ಆಫ್ ಇಂಡಿಯಾ ಐಯುಸಿ ಶುಲ್ಕವನ್ನ ರದ್ದುಗೊಳಿಸಿದ ಹಿನ್ನೆಲೆ ಜಿಯೋ ಎಲ್ಲಾ ದೇಶಿ ನೆಟ್ವರ್ಕ್ಗಳ ಕರೆಗೆ ವಿಧಿಸಲಾಗುತ್ತಿದ್ದ ಐಯುಸಿ ಶುಲ್ಕವನ್ನ ಕೊನೆಗೊಳಿಸಲಿದೆ.
ಈ ಹೊಸ ಕ್ರಮದಿಂದ ಜಿಯೋ ಮತ್ತೊಮ್ಮೆ ತನ್ನ ಗ್ರಾಹಕರಿಗೆ ಯಾವುದೇ ನೆಟ್ವರ್ಕ್ಗೆ ಉಚಿತ ಕರೆ ಸೌಲಭ್ಯವನ್ನ ನೀಡಿದೆ. ಜಿಯೋದಿಂದ ಜಿಯೋಗೆ ಉಚಿತ ಕರೆ ಮೊದಲಿನಿಂದಲೂ ಇದೆ. ಇದೀಗ ಅನ್ಯ ನೆಟ್ವರ್ಕ್ ಕರೆ ಉಚಿತವಾಗಿರಲಿದೆ ಎಂದು ಜಿಯೋ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಸೆಪ್ಟೆಂಬರ್ 19ರಂದು ಜಿಯೋ ಕಂಪನಿ ಬೇರೆ ನೆಟ್ವರ್ಕ್ಗೆ ಕರೆ ಮಾಡಿದರೆ ಅಂತಹ ಕರೆಗೆ ದರ ವಿಧಿಸೋದು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳಿತ್ತು. ಆದರೆ ಇದೀಗ ತನ್ನ ನಿರ್ಧಾರವನ್ನ ಜಿಯೋ ಬದಲಾಯಿಸಿದೆ.
ಡಿಜಿಟಲ್ ಇಂಡಿಯಾ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿರುವ ಜಿಯೋ ಕಂಪನಿ ಪ್ರತಿಯೊಬ್ಬರಿಗೂ ಕಡಿಮೆ ದರದಲ್ಲಿ ಗುಣಮಟ್ಟದ ಸೇವೆಯನ್ನ ನೀಡಲು ಶ್ರಮಿಸುತ್ತಿದೆ. ಸಾಕಷ್ಟು ಆಫರ್ಗಳನ್ನ ನೀಡುವ ಮೂಲಕ ಜಿಯೋ ಗ್ರಾಹಕ ಸ್ನೇಹಿ ಟೆಲಿಕಾಂ ಕಂಪನಿಯಾಗಿ ಮುಂದುವರಿದಿದೆ.