ಸಂಪೂರ್ಣ ಜಗತ್ತು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳನ್ನ ಪ್ರಾಣಾಪಾಯದಿಂದ ಕಾಪಾಡೋಕೆ ವೈದ್ಯರು ಹಾಗೂ ನರ್ಸ್ಗಳು ಇನ್ನಿಲ್ಲದ ಕಸರತ್ತನ್ನ ಮಾಡ್ತಿದ್ದಾರೆ. ಆದರೆ ಆಘಾತಕಾರಿ ಘಟನೆಯೊಂದರಲ್ಲಿ ಆಸ್ಪತ್ರೆಯ ಶೌಚಾಲಯದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯ ಜೊತೆ ಲೈಂಗಿಕ ಕ್ರಿಯೆ ನಡೆಸಲು ಹೋದ ನರ್ಸ್ ಸಸ್ಪೆಂಡ್ ಆಗಿದ್ದಾಳೆ.
ಇಂಡೋನೇಷಿಯಾದಲ್ಲಿ ನಡೆದ ವಿಚಿತ್ರ ಘಟನೆ ಇದಾಗಿದೆ. ರೋಗಿ ಜೊತೆ ಲೈಂಗಿಕ ಕ್ರಿಯೆ ನಡೆಸಲು ಪಿಪಿಇ ಕಿಟ್ ತೆಗೆದು ಹಾಕಿದ್ದನ್ನ ನರ್ಸ್ ಒಪ್ಪಿಕೊಂಡ ನಂತರ ಆಕೆಯನ್ನ ಅಮಾನತು ಮಾಡಲಾಗಿದೆ. ಇಂಡೋನೇಷಿಯಾದ ಅಶ್ಲೀಲ ವಿರೋಧಿ ಕಾನೂನಿನ ಅಡಿಯಲ್ಲಿ ನರ್ಸ್ ಹಾಗೂ ರೋಗಿಯನ್ನ ವಿಚಾರಣೆಗೊಳಪಡಿಸಲಾಗಿದೆ.
ತಪ್ಪೊಪ್ಪಿಗೆ ನಂತರ ಅಧಿಕಾರಿಗಳು ಈ ಜೋಡಿಯನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ನರ್ಸ್ ವರದಿ ನೆಗೆಟಿವ್ ಬಂದಿದೆ. ಆದರೆ ವ್ಯಕ್ತಿ ಮಾತ್ರ ಇನ್ನೂ ಕೊರೊನಾ ಸೋಂಕಿತನಾಗಿಯೇ ಉಳಿದಿದ್ದಾನೆ. ಒಂದು ವೇಳೆ ಆರೋಪ ಸಾಬೀತಾದ್ರೆ ಇಬ್ಬರಿಗೂ 10 ವರ್ಷಗಳ ಜೈಲೂಟ ಫಿಕ್ಸ್ ಆಗಿರಲಿದೆ.