ಕೊರೊನಾದಿಂದಾಗಿ ಈ ವರ್ಷ ಅನೇಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಮುಂದಿನ ವರ್ಷ ಇಂತಹ ಸಮಸ್ಯೆ ಉಂಟಾಗಬಾರದು ಅಂದರೆ ನಾವು ಸರಿಯಾದ ಸ್ಕೀಮ್ಗಳಲ್ಲಿ ಬಂಡವಾಳ ಹಾಕೋದು ಒಳ್ಳೆಯದು. ಈಗಾಗಲೇ ಸರ್ಕಾರಿ ಸಂಸ್ಥೆಗಳೇ ಗ್ರಾಹಕರಿಗೆ ಅನೇಕ ಸ್ಕೀಮ್ಗಳನ್ನ ಪರಿಚಯ ಮಾಡಿವೆ. ಇದೆಲ್ಲದರಲ್ಲಿ ಸರ್ಕಾರ ಪರಿಚಯಿಸಿರುವ ಅತ್ಯಂತ ಹಳೆಯ ಅಂಚೆ ಕಚೇರಿಯ ಉಳಿತಾಯ ಸ್ಕೀಮ್ಗಳೂ ಸಹ ಒಂದು.
ಅಂಚೆ ಕಚೇರಿಯ ಉಳಿತಾಯ ಸ್ಕೀಮ್ಗಳು ಹಳೆಯ ಪ್ಲಾನ್ಗಳಾಗಿದ್ದರೂ ಸಹ ಈಗಲೂ ಪ್ರಚಲಿತದಲ್ಲಿವೆ. ಇಲ್ಲಿ ನೀವು ಯಾವುದೇ ರಿಸ್ಕ್ ಇಲ್ಲದೇ ನಿಮ್ಮ ಉಳಿತಾಯದ ಹಣವನ್ನ ಕೂಡಿಡಬಹುದಾಗಿದೆ. ಇದರಲ್ಲಿ ಕಿಸಾನ್ ವಿಕಾಸ್ ಪತ್ರ ಕೂಡ ಒಂದಾಗಿದ್ದು ಇದರಲ್ಲಿ ನೀವು ನಿಮ್ಮ ಉಳಿತಾಯದ ಹಣವನ್ನ ದುಪ್ಪಟ್ಟು ಮಾಡಿಕೊಳ್ಳಬಹುದಾಗಿದೆ.
ಏಪ್ರಿಲ್ 1ರಿಂದ ಹೂಡಿಕೆದಾರರಿಗೆ ವಾರ್ಷಿಕವಾಗಿ ಶೇಕಡಾ 6.9ರಷ್ಟು ಬಡ್ಡಿದರವನ್ನ ನೀಡಲಾಗುತ್ತಿದೆ. ಕಿಸಾನ್ ವಿಕಾಸ್ ಪತ್ರದಲ್ಲಿ ನೀವು ಹೂಡಿಕೆ ಮಾಡುವ ಮೊತ್ತವು 124 ತಿಂಗಳಲ್ಲಿ ಅಂದರೆ 10 ವರ್ಷ ಹಾಗೂ 4 ತಿಂಗಳಲ್ಲಿ ದುಪ್ಪಟ್ಟಾಗಲಿದೆ. ಕಿಸಾನ್ ವಿಕಾಸ್ ಪತ್ರದಲ್ಲಿ ನೀವು ಕನಿಷ್ಟ 1 ಸಾವಿರ ರೂಪಾಯಿಯಿಂದ 100 ಗುಣಾಕಾರದಲ್ಲಿ ಗರಿಷ್ಟ ಹಣ ಎಷ್ಟು ಬೇಕಿದ್ದರೂ ಕೂಡಿಡಬಹುದಾಗಿದೆ .
ಕಿಸಾನ್ ವಿಕಾಸ್ ಪತ್ರ ಪ್ರಮಾಣ ಪತ್ರವನ್ನ ಈ ಕೆಳಗಿನವವರು ಖರೀದಿಸಬಹುದು.
1. ವಯಸ್ಕ
2.ಜಂಟಿ ಎ ಖಾತೆ (ಗರಿಷ್ಠ 3 ವಯಸ್ಕರು)
3.ಜಂಟಿ ಬಿ ಖಾತೆ (ಗರಿಷ್ಠ 3 ವಯಸ್ಕರು)
4. 10 ವರ್ಷಕ್ಕಿಂತ ಮೇಲ್ಪಟ್ಟ ಚಿಕ್ಕವರು
5. ಅಪ್ರಾಪ್ತನ ಪರವಾಗಿ ವಯಸ್ಕ.
ಕಿಸಾನ್ ವಿಕಾಸ್ ಪತ್ರವನ್ನ ಪಾಸ್ಬುಕ್ ರೂಪದಲ್ಲಿ ನೀಡಲಾಗುತ್ತೆ. ಇದನ್ನ ಯಾವುದೇ ವಿಭಾಗೀಯ ಅಂಚೆ ಕಚೇರಿಯಿಂದ ಖರೀದಿ ಮಾಡಬಹುದಾಗಿದೆ. ನಾಮ ನಿರ್ದೇಶನ ಸೌಲಭ್ಯವೂ ಲಭ್ಯವಿದೆ. ಕೆವಿಪಿ ಪ್ರಮಾಣ ಪತ್ರವನ್ನ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಬಹುದಾಗಿದೆ.