ಹೊಸ ವರ್ಷಕ್ಕೆ ಆನ್ ಲೈನ್ ಮಾರಾಟ ಮಳಿಗೆಗಳು ಭರ್ಜರಿ ಡಿಸ್ಕೌಂಟ್ ನೀಡುತ್ತಿವೆ. ಜನವರಿ 1 ರಿಂದ 3ರ ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ಆಫರ್ ಗಳನ್ನು ನೀಡುತ್ತಿದೆ. ಟಿವಿ, ಹೆಡ್ಪೋನ್, ರೆಫ್ರಿಜರೇಟರ್, ವಾಷಿಂಗ್ ಮಷಿನ್ ಮುಂತಾದವುಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿದೆ.
ಇನ್ನು ಕ್ರೆಡಿಟ್ ಕಾರ್ಡ್ ಗಳ ಮೂಲಕ ಖರೀದಿ ಮಾಡಿದರೆ ಹೆಚ್ಚಿನ ಡಿಸ್ಕೌಂಟ್ ಸಿಗಲಿದೆ. ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಬಳಸಿ ಬೇಕಾದ ವಸ್ತು ಖರೀದಿಸಿದರೆ ಶೇ.10 ರಷ್ಟು ಇನ್ಸ್ಟಂಟ್ ಡಿಸ್ಕೌಂಟ್ ನೀಡಲಾಗುತ್ತಿದೆ. ಇದರ ಜೊತೆಗೆ ಇಎಮ್ಐ ಆಯ್ಕೆಯನ್ನು ನೀಡಲಾಗುತ್ತಿದೆ.
ಬೋಟ್, ಜೆಬಿಎಲ್, ಮಿ ಸೌಂಡ್ಬಾರ್ ಮೇಲೆ ಶೇ.30 ರಷ್ಟು ಡಿಸ್ಕೌಂಟ್, ಡಿಎಸ್ಎಲ್ಆರ್, ಮಿರರ್ಲೆಸ್ ಮತ್ತು ಪಾಯಿಂಟ್ ಶೂಟ್ ಕ್ಯಾಮೆರಾಗಳ ಮೇಲೂ ಡಿಸ್ಕೌಂಟ್, ಸ್ಮಾರ್ಟ್ವಾಚ್ ಮತ್ತು ಫಿಟ್ನೆಸ್ ಟ್ರಾಕರ್ ಮೇಲೆ ಶೇ.40 ರಷ್ಟು ಡಿಸ್ಕೌಂಟ್, ಮೈಕ್ರೊವೇವ್ಸ್ ಮತ್ತು ಚಿಮಿನಿಗಳ ಮೇಲೆ ಶೇ.40 ರಷ್ಟು ಆಫರ್ ನೀಡಲಾಗಿದೆ.