ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯ ಥಾಟ್ರಿಯಲ್ಲಿನ ಮೂರು ಗ್ರಾಮಗಳು ದೇಶಕ್ಕೆ ಸ್ವಾತಂತ್ರ್ಯ ಬಳಿಕ ಇದೇ ಮೊದಲ ಬಾರಿಗೆ ವಿದ್ಯುತ್ ಸೌಕರ್ಯವನ್ನ ಪಡೆಯಲು ಸಜ್ಜಾಗಿವೆ.
ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಥಾತ್ರಿ ಅಥರ್ ಜಾರ್ಗರ್ ತಾಂಟಾ ಗ್ರಾಮಕ್ಕೆ ಭೇಟಿ ನೀಡಿ 2021ರ ಜನವರಿ 15ರ ಒಳಗಾಗಿ ಈ ಗ್ರಾಮಕ್ಕೆ ವಿದ್ಯುತ್ ಸೌಕರ್ಯ ನೀಡೋದಾಗಿ ಅಭಯ ನೀಡಿದ್ರು.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜೊತೆ ಕೆಲ ದಿನಗಳ ಹಿಂದೆ ಸಭೆ ಸೇರಿದ್ದ ಗ್ರಾಮಸ್ಥರು ತಮ್ಮ ಗ್ರಾಮಗಳಲ್ಲಿ ಇನ್ನೂ ವಿದ್ಯುತ್ ಸೌಕರ್ಯ ಇಲ್ಲ ಎಂಬ ವಿಚಾರವನ್ನ ಬೆಳಕಿಗೆ ತಂದಿದ್ದರು. ಇದಾದ ಬಳಿಕ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಈ ಹಳ್ಳಿಗಳಿಗೆ ವಿದ್ಯುತ್ ಸೌಕರ್ಯ ನೀಡಲು ಎಲ್ಲಾ ವ್ಯವಸ್ಥೆಯನ್ನ ಮಾಡುತ್ತಿದ್ದಾರೆ.
ಥಾಟ್ರಿ ಹಿಮಾಲಯ ಪರ್ವತದ ತಪ್ಪಲಿನಲ್ಲಿನ ಚೆನಾಬ್ ನದಿ ದಡದಲ್ಲಿರುವ ಒಂದು ಸುಂದರವಾದ ಗ್ರಾಮ. ದಟ್ಟ ಕಾಡು ಹಾಗೂ ಅಲ್ಲಲ್ಲಿ ಹರಿಯುತ್ತಿರುವ ತೊರೆಗಳು ಈ ಗ್ರಾಮದ ಸೌಂದರ್ಯವನ್ನ ಇನ್ನಷ್ಟು ಹೆಚ್ಚಿಸಿದೆ. 2010 ರಲ್ಲಿ ಪಟ್ಟಣವಾಗಿ ಬಡ್ತಿ ಪಡೆದ ಥಾಟ್ರಿ, ದೋಡಾದ ಜಿಲ್ಲಾ ಕೇಂದ್ರದಿಂದ ಸುಮಾರು 36 ಕಿಲೋಮೀಟರ್ ದೂರದಲ್ಲಿದೆ.