ದತ್ತ ಜಯಂತಿಯ ಪ್ರಯುಕ್ತ ದತ್ತಾತ್ರೇಯ ಸ್ವಾಮಿಯನ್ನು ಈ ರೀತಿಯಾಗಿ ಪೂಜಿಸಿ 29-12-2020 2:07PM IST / No Comments / Posted In: Latest News, Astro ಇಂದು ದತ್ತ ಜಯಂತಿ ದಿನವಾಗಿದೆ. ನಾಳೆ ದತ್ತ ಪೂರ್ಣಿಮಾ ಬಂದಿದ್ದು, ಹಾಗಾಗಿ ಇಂದು, ನಾಳೆ ದತ್ತಾತ್ರೇಯ ಸ್ವಾಮಿಯನ್ನು ಪೂಜಿಸಿದರೆ ನಿಮಗೆ ವಿಶೇಷ ಫಲ ಸಿಗುತ್ತದೆ. ಇಂದು ದತ್ತಾತ್ರೇಯ ಸ್ವಾಮಿಯನ್ನು ಬಿಳಿ ಅಥವಾ ಹಳದಿ ಹೂಗಳಿಂದ ಪೂಜೆ ಮಾಡಬೇಕು. ಹಾಗೇ ದತ್ತಾತ್ರೇಯ ಸ್ವಾಮಿಗೆ 3 ಸಂಖ್ಯೆ ಬಹಳ ಪ್ರಿಯವಾಗಿದ್ದರಿಂದ 3 ಬತ್ತಿಗಳಿಂದ ಇಟ್ಟು ದೀಪಾರಾಧನೆ ಮಾಡಬೇಕು. ಹಾಗೇ ದೇವರಿಗೆ ರವೆ ಉಂಡೆಯನ್ನು ನೈವೇದ್ಯವಾಗಿ ಅರ್ಪಿಸಬೇಕು. ಹಾಗೇ “ಓಂ ಕಾಲಾಗ್ನಿ ಶಮನಾಯ ನಮಃ” ಮಂತ್ರವನ್ನು 21 ಬಾರಿ ಹೇಳಿ ಕರ್ಪೂರದ ಆರತಿ ಬೆಳಗಿಸಿ. ಮನೆಯ ಹಿರಿಯರ ಕಾಲಿಗೆ ಬಿದ್ದು ಅವರ ಕೈಯಿಂದ ಅಕ್ಷತೆ ಕಾಳನ್ನು ಹಾಕಿಸಿಕೊಂಡು ಆಶೀರ್ವಾದ ಪಡೆಯಬೇಕು. ಇದರಿಂದ ಗುರುಗಳ ಅನುಗ್ರಹ ದೊರೆಯುತ್ತದೆ. ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805 ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು 8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003