ಧೀರೂಭಾಯ್ ಅಂಬಾನಿ ಅವರ ಜನ್ಮ ದಿನಾಚರಣೆಯಂದು, ಅವರ ಸೊಸೆ ಟೀನಾ ಅಂಬಾನಿ ಅವರು ರಿಲಯನ್ಸ್ ಸಂಘಟನೆಯ ದಿವಂಗತ ಸಂಸ್ಥಾಪಕರನ್ನು ನೆನಪಿಸಿಕೊಳ್ಳುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. 63 ರ ಹರೆಯದ ಟೀನಾ ಅಂಬಾನಿ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ʼʼನಿಮ್ಮಂತೆಯೇ ಯಾರೂ ಇಲ್ಲ “ಎಂದು ಬರೆದಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಧೀರೂಬಾಯ್ ಅಂಬಾನಿ ಜೊತೆಗಿನ ಎರಡು ಫೋಟೋಗಳನ್ನ ಟೀನಾ ಶೇರ್ ಮಾಡಿದ್ದಾರೆ. ಮೊದಲನೆಯ ಫೋಟೋದಲ್ಲಿ ಟೀನಾ ಮಾವನ ಪಕ್ಕದಲ್ಲಿ ಮಂಡಿಯೂರಿ ಕುಳಿತಿದ್ದಾರೆ. ಇನ್ನೊಂದು ಫೋಟೋದಲ್ಲಿ ಪತಿ ಹಾಗೂ ಧೀರೂಭಾಯ್ ಕಿರಿ ಮಗ ಅನಿಲ್ ಅಂಬಾನಿ ಜೊತೆಗಿರುವ ಫೋಟೋವನ್ನ ಶೇರ್ ಮಾಡಿದ್ದಾರೆ.
https://www.instagram.com/p/CJU18PnJj-X/?utm_source=ig_web_copy_link