ಗಿನ್ನೆಸ್ ವಿಶ್ವ ದಾಖಲೆಯ ಪುಟದಲ್ಲಿ ಹೆಸರನ್ನ ನೋಂದಾಯಿಸೋದು ಅಂದರೆ ಸುಲಭದ ಮಾತಲ್ಲ. ಅದರಲ್ಲೂ ಒಂದಕ್ಕಿಂತ ಹೆಚ್ಚು ದಾಖಲೆಯನ್ನ ಮಾಡೋದು ಅಂದ್ರಂತೂ ಅವಿರತ ಶ್ರಮವಿಲ್ಲದೇ ಸಾಧ್ಯವೇ ಇಲ್ಲ. ಅಂತದ್ರಲ್ಲಿ ಇಲ್ಲೊಬ್ಬ ವ್ಯಕ್ತಿ ಈಗಾಗಲೇ ಸಾಕಷ್ಟು ದಾಖಲೆಗಳನ್ನ ಹೊಂದಿದ ಬಳಿಕವೂ ಮತ್ತೊಂದು ವಿಶ್ವ ದಾಖಲೆ ಕೀರ್ತಿಗೆ ಭಾಜನರಾಗಿದ್ದಾರೆ.
ಸ್ಟಿಗ್ ಎಂಬವರು ನೀರಿನ ಆಳದಲ್ಲಿ ಉಸಿರನ್ನ ಹೊರ ಹಾಕದೇ ಅತ್ಯಂತ ದೂರ ಪ್ರಯಾಣಿಸುವ ಮೂಲಕ ಪುರುಷರ ವಿಭಾಗದಲ್ಲಿ ದಾಖಲೆ ಬರೆದಿದ್ದಾರೆ. ಅನುಭವಿ ಈಜುಗಾರ ಬರೋಬ್ಬರಿ 2 ನಿಮಿಷ 42 ಸೆಕೆಂಡ್ಗಳ ಉಸಿರನ್ನ ಬಿಗಿ ಹಿಡಿದು 202 ಮೀಟರ್ಗೂ ಹೆಚ್ಚು ದೂರ ಕ್ರಮಿಸಿದ್ದಾರೆ.
ಗಿನ್ನೆಸ್ ವಿಶ್ವ ದಾಖಲೆ ತನ್ನ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಈ ವಿಡಿಯೋವನ್ನ ಶೇರ್ ಮಾಡಿದೆ. ಇದರಲ್ಲಿ ಸ್ಟಿಗ್ರ ವಿಶ್ವ ದಾಖಲೆಯ ಸಾಧನೆಯನ್ನ ನೀವು ನೋಡಬಹುದಾಗಿದೆ.
https://www.facebook.com/GuinnessWorldRecords/videos/1529807660563198/?t=0